ಬೆಂಗಳೂರು ಕ್ರೀಯಾಶೀಲ ನಗರ : ಜೆ.ಎಲ್.ಎಲ್ ಸಮೀಕ್ಷೆ

0
527

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಗಳ ನೆಲೆಯಾಗಿರುವ ಬೆಂಗಳೂರು ಮಹಾನಗರ ಈ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕ್ರಿಯಾಶೀಲ ನಗರವಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ನ ಸಮೀಕ್ಷೆಯಲ್ಲಿ ಬಣ್ಣಿಸಲಾಗಿದೆ.

ಮುಂಬೈ (ಪಿಟಿಐ): ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಗಳ ನೆಲೆಯಾಗಿರುವ ಬೆಂಗಳೂರು ಮಹಾ
ನಗರ ಈ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕ್ರಿಯಾಶೀಲ ನಗರವಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ನ ಸಮೀಕ್ಷೆಯಲ್ಲಿ ಬಣ್ಣಿಸಲಾಗಿದೆ.

‘ತಂತ್ರಜ್ಞಾನ ಕ್ಷೇತ್ರವು ರಿಯಲ್‌ ಎಸ್ಟೇಟ್‌ ಮತ್ತು ಆರ್ಥಿಕತೆಯ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಷ್ಟೇ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಕೊಡುತ್ತಿಲ್ಲ. ವ್ಯಾಪಕವಾಗಿ ಪಸರಿಸುತ್ತಿರುವ ಸ್ಟಾರ್ಟ್‌ಅಪ್‌ ಸಂಸ್ಕೃತಿಯೂ ಗಮನಾರ್ಹ ಕೊಡುಗೆ ನೀಡುತ್ತಿದೆ’ ಎಂದು ಜೆಎಲ್‌ಎಲ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌ ಹೇಳಿದ್ದಾರೆ.

‘ಮಾಹಿತಿ ತಂತ್ರಜ್ಞಾನ ಮತ್ತು ನವೋದ್ಯಮ ಸಂಸ್ಕೃತಿಯಿಂದ ಬೆಂಗಳೂರು ಮತ್ತು ಹೈದರಾಬಾದ್‌ ಶ್ರೇಯಾಂಕದಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿವೆ.

‘ಭಾರತದ ಸಿಲಿಕಾನ್‌ ಕಣಿವೆ ಖ್ಯಾತಿಯ ಬೆಂಗಳೂರು ನಗರವು, ರಿಯಲ್‌ ಎಸ್ಟೇಟ್‌ ವಲಯದಲ್ಲಿ ವರ್ಷಗಳಿಂದಲೂ ಗಮನ ಸೆಳೆಯುತ್ತ ಬಂದಿದೆ. ವಾಣಿಜ್ಯ ಚಟುವಟಿಕೆಗಳು, ರಿಟೇಲ್‌ ವಹಿವಾಟು, ಹೋಟೆಲ್‌ ಮತ್ತು ಗೃಹ ನಿರ್ಮಾಣ ವಲಯದಲ್ಲಿನ ಬೆಳವಣಿಗೆಗಳು ನಗರದ ಖ್ಯಾತಿ ಹೆಚ್ಚಲು ಗಣನೀಯ ಕೊಡುಗೆ ನೀಡುತ್ತಿವೆ’ ಎಂದೂ ಅವರು ಹೇಳಿದ್ದಾರೆ.