ಬೆಂಗಳೂರು: ಕಚೇರಿ ಗುತ್ತಿಗೆಗೆ ನೆಚ್ಚಿನ ನಗರ

0
248

2019ರ ಮೊದಲ ತ್ರೈಮಾಸಿಕದಲ್ಲಿ ಗುತ್ತಿಗೆಗೆ ಕಚೇರಿ ಪಡೆಯುವವರಿಗೆ ಬೆಂಗಳೂರು ನೆಚ್ಚಿನ ನಗರವಾಗಿದೆ ಎಂದು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್‌ಇ ಸೌತ್‌ ಏಷ್ಯಾ ಪ್ರೈವೇಟ್‌ ಲಿಮಿಟೆಡ್‌ ಹೇಳಿದೆ‌.

ಬೆಂಗಳೂರು: 2019ರ ಮೊದಲ ತ್ರೈಮಾಸಿಕದಲ್ಲಿ ಗುತ್ತಿಗೆಗೆ ಕಚೇರಿ ಪಡೆಯುವವರಿಗೆ ಬೆಂಗಳೂರು ನೆಚ್ಚಿನ ನಗರವಾಗಿದೆ ಎಂದು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್‌ಇ ಸೌತ್‌ ಏಷ್ಯಾ ಪ್ರೈವೇಟ್‌ ಲಿಮಿಟೆಡ್‌ ಹೇಳಿದೆ‌.

ಭಾರತದ ಕಚೇರಿ ಮಾರುಕಟ್ಟೆಯ ಮೊದಲ ತ್ರೈಮಾಸಿಕದ ವರದಿಯಲ್ಲಿ ಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್‌, ಪುಣೆ, ಅಹ್ಮದಾಬಾದ್‌ ಮತ್ತು ಕೊಚ್ಚಿ ನಗರಗಳ ಕಚೇರಿ ಗುತ್ತಿಗೆ ಸ್ಥಳಾವಕಾಶದ ಮಾಹಿತಿಗಳನ್ನು ನೀಡಿದೆ.

ಪ್ರಮುಖ 9 ನಗರಗಳಲ್ಲಿ ಕಚೇರಿ ಸ್ಥಳಾವಕಾಶ ಗುತ್ತಿಗೆ ಚಟುವಟಿಕೆಯು 2019ರ ಜನವರಿ–ಮಾರ್ಚ್‌ ಅವಧಿಯಲ್ಲಿ 1.28 ಕೋಟಿ ಚದರ ಅಡಿಗಳಷ್ಟು ಅಲ್ಪ ಪ್ರಗತಿಯನ್ನಷ್ಟೇ ಕಂಡಿದೆ.

ಮುಂಚೂಣಿಗೆ ಹೈದರಾಬಾದ್: ಇದೇ ಮೊದಲ ಬಾರಿಗೆ ಕಚೇರಿ ಮಾರುಕಟ್ಟೆಯಲ್ಲಿ ಹೈದರಾಬಾದ್‌, ಬೆಂಗಳೂರು ನಗರವನ್ನು ಹಿಂದಿಕ್ಕಿದೆ. 

ಒಟ್ಟಾರೆ ಕಚೇರಿ ಸ್ಥಳಾವಕಾಶದ ಬೇಡಿಕೆಯಲ್ಲಿ ತಂತ್ರಜ್ಞಾನ ಕಾರ್ಪೊರೇಟ್‌ ಸಂಸ್ಥೆಗಳ ಪ್ರಮಾಣ ಶೇ 33ರಷ್ಟಿದೆ. ಕೋವರ್ಕಿಂಗ್‌ ಆಪರೇಟರ್ಸ್‌ಗಳ ಪಾಲು ಶೇ 16ರಷ್ಟಿದೆ ಎಂದು ಭಾರತದ ಕಚೇರಿ ಮಾರುಕಟ್ಟೆ ವರದಿಯಲ್ಲಿ ತಿಳಿಸಲಾಗಿದೆ.