ಬೆಂಗಳೂರು ಎಫ್‌ಸಿಗೆ ಬ್ರೆಜಿಲ್‌ನ ಆಗಸ್ಟೊ

0
18

ಬ್ರೆಜಿಲ್‌ನ ಮಿಡ್‌ಫೀಲ್ಡರ್‌ ರಫೇಲ್‌ ಆಗಸ್ಟೊ, ಮುಂದಿನ ಎರಡು ವರ್ಷಗಳ ಕಾಲ ಸೂಪ‌ರ್‌ ಲೀಗ್‌ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಪರ ಆಡಲಿದ್ದಾರೆ.

ಬೆಂಗಳೂರು (ಪಿಟಿಐ): ಬ್ರೆಜಿಲ್‌ನ ಮಿಡ್‌ಫೀಲ್ಡರ್‌ ರಫೇಲ್‌ ಆಗಸ್ಟೊ, ಮುಂದಿನ ಎರಡು ವರ್ಷಗಳ ಕಾಲ ಸೂಪ‌ರ್‌ ಲೀಗ್‌ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಪರ ಆಡಲಿದ್ದಾರೆ. 

ರಿಯೊ ಡಿ ಜನೈರೊ ನಿವಾಸಿಯಾದ ಆಗಸ್ಟೊ ಅವರು 2020–21ರವರೆಗೆ ಆಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕ್ಲಬ್‌ ಆಗಸ್ಟ್ 24 ರ ಶನಿವಾರ ಪ್ರಕಟಿಸಿದೆ. ಬೆಂಗಳೂರು ತಂಡ ಅಕ್ಟೋಬರ್‌ 21ರಂದು ನಾರ್ತ್‌ ಈಸ್ಟ್‌ ಯುನೈಟೆಡ್‌ ವಿರುದ್ಧ ಆಡುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲಿದೆ.‌

28 ವರ್ಷದ ಆಗಸ್ಟೊ, ಸ್ಪೇನ್‌ನ ಕಾರ್ಲೋಸ್‌ ಕ್ವಾಡ್ರಟ್ ಕೋಚ್‌ ಆಗಿರುವ ಬೆಂಗಳೂರು ಎಫ್‌ಸಿ ತಂಡಕ್ಕೆ ಸೇರುತ್ತಿರುವ  ಆರನೇ ವಿದೇಶಿ ಆಟಗಾರ ಎನಿಸಲಿದ್ದಾರೆ. ತಂಡಕ್ಕೆ ಸೇರುವ ಬ್ರೆಜಿಲ್‌ನ ಮೊದಲ ಆಟಗಾರ ಕೂಡ.

ಆಗಸ್ಟೊ ಈ ಸಂದರ್ಭದಲ್ಲಿ ಸಂಭ್ರಮ ವ್ಯಕ್ತಪಡಿಸಿದರು. ‘ಕಳೆದ ವರ್ಷ ಪ್ರಶಸ್ತಿ ಗೆಲ್ಲಲು ಬೆಂಗಳೂರು ತಂಡ ನಡೆಸಿದ ಹೋರಾಟವನ್ನು ಕಂಡು ಬೆರಗಾದೆ. ಬೆಂಗಳೂರು ತಂಡಕ್ಕೆ ಉತ್ತಮ ಕೋಚ್‌ ಇದ್ದಾರೆ. ಒಳ್ಳೆಯ ಆಟಗಾರರ ಪಡೆಯಿದೆ. ಪ್ರೇಕ್ಷಕರ ಬೆಂಬಲವೂ ಇದೆ. ಎಲ್ಲರೂ ಸೇರಿ ಕ್ಲಬ್‌ಗೆ ಇನ್ನಷ್ಟು ಪ್ರಶಸ್ತಿ ಗೆಲ್ಲಿಸಿಕೊಡಬಹುದು’ ಎಂದು ಪ್ರತಿಕ್ರಿಯಿಸಿದರು.
 
ರಿಕ್‌ ಪಾರ್ಟಲು, ದಿಮಾಸ್‌ ಡೆಲ್ಗಾಡೊ ಮತ್ತು ಯುಜೆನೆಸನ್‌ ಲಿಂಗ್ಡೊ ಅವರನ್ನು ಹೊಂದಿರುವ ತಂಡದ ಮಿಡ್‌ಫೀಲ್ಡ್‌ ಕ್ಷೇತ್ರ ಆಗಸ್ಟೊ ಸೇರ್ಪಡೆಯಿಂದ ಇನ್ನಷ್ಟು ಬಲಿಷ್ಠವಾಗಲಿದೆ.