ಬೆಂಗಳೂರಿನಿಂದ ಇದೀಗ ವಿಮಾನಯಾನ ಖಾಸಗಿ ಬಸ್ ದರಗಿಂತಲೂ ಅಗ್ಗ!

0
21

ಮುಂಗಾರು ಮಳೆ ಅವಧಿ ಆರಂಭವಾಗಿರುವಂತೆಯೇ ಬೆಂಗಳೂರಿನಿಂದ ಹಾರಾಡುವ ವಿಮಾನಯಾನ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಷ್ಟೇ ಯಾಕೆ ಇದು ಖಾಸಗಿ ಬಸ್‌ ದರಗಿಂತಲೂ ಕಡಿಮೆಯಾಗಿದೆ.

ಬೆಂಗಳೂರು: ಮುಂಗಾರು ಮಳೆ ಅವಧಿ ಆರಂಭವಾಗಿರುವಂತೆಯೇ ಬೆಂಗಳೂರಿನಿಂದ ಹಾರಾಡುವ ವಿಮಾನಯಾನ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಷ್ಟೇ ಯಾಕೆ ಇದು ಖಾಸಗಿ ಬಸ್‌ ದರಗಿಂತಲೂ ಕಡಿಮೆಯಾಗಿದೆ. 

ಎಸಿ ಬಸ್‌ಗೆ ನೀಡುವ ಪ್ರಯಾಣ ದರದಲ್ಲಿ ನೀವೀಗ ವಿಮಾನ ಟಿಕೆಟ್ ಗಳಿಸಬಹುದಾಗಿದೆ. ಉದಾಹರಣೆಗೆ ಬೆಂಗಳೂರು-ಕೊಚ್ಚಿ ವಿಮಾನಯಾನ ದರ ಕೇವಲ 1400 ರೂ.ಗಳಾಗಿವೆ. ಇದೇ ದರಕ್ಕೆ ಬೆಂಗಳೂರು-ಹೈದಾರಾಬಾದ್ ಹಾಗೂ ಬೆಂಗಳೂರು-ಚೆನ್ನೈ ನಗರಗಳಿಗೂ ವಿಶೇಷ ಆಫರ್ ಒದಗಿಸುತ್ತಿದೆ. 

ಈ ಮೇಲಿನ ಗಮ್ಯಸ್ಥಾನಗಳಿಗೆ ತರಳಲು ಬಸ್‌ಗಳಲ್ಲಿ ಸರಾಸರಿ ರಿಂದ 10 ತಾಸು ತಗುಲಲಿದೆ. ಆದರೆ ವಿಮಾನಯಾನದ ಮೂಲಕ ನಿಮ್ಮ ಅಮೂಲ್ಯ ಸಮಯವನ್ನು ಉಳಿತಾಯ ಮಾಡಬಹುದಾಗಿದೆ. 

ಸಾಮಾನ್ಯವಾಗಿ ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ. ಇದನ್ನು ಸರಿದೂಗಿಸಲು ವಿಮಾನಯಾನ ಸಂಸ್ಥೆಗಳು ಆಕರ್ಷಕ ಆಫರ್‌ಗಳನ್ನು ಪ್ರಕಟಿಸುತ್ತದೆ. 

ಸ್ವದೇಶಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಈಗಾಗಲೇ ‘ಮೆಗಾ ಮಾನ್ಸೂನ್ ಸೇಲ್’ ಆಫರ್ ಪ್ರಕಟಿಸಿದ್ದು, ಚೆನ್ನೈ-ಬೆಂಗಳೂರು ಸೇರಿದಂತೆ ದೇಶೀಯ ಪ್ರಯಾಣ ದರವು ಬರಿ 999 ರೂ.ಗಳಿಗೆ ಆರಂಭವಾಗುತ್ತದೆ. ಸ್ಪೈಸ್‌ಜೆಟ್ ಆಫರ್ ಭಾನುವಾರ ಮಧ್ಯರಾತ್ರಿಯ ವರೆಗೂ ಚಾಲ್ತಿಯಲ್ಲಿರಲಿದ್ದು, ಪ್ರಯಾಣ ಅವಧಿ 2018 ಅಕ್ಟೋಬರ್ 8ರ ವರೆಗೂ ಅನ್ವಯವಾಗಿರುತ್ತದೆ. 

ಏರ್ ಏಷ್ಯಾ ಸಹ 1299 ರೂ.ಗಳಿಗೆ ಬೆಂಗಳೂರು-ಕೊಚ್ಚಿ, ಬೆಂಗಳೂರು-ಹೈದರಾಬಾದ್ ಸೇರಿದಂತೆ ದೇಶಿಯ ವಿಮಾನಯಾವನ್ನುಒದಗಿಸುತ್ತಿದೆ. ಇದು ಸಹ ಜುಲೈ ರೊಳಗೆ ಬುಕ್ಕಿಂಗ್ ಮಾಡಬೇಕಿದ್ದು, 2019 ಜನವರಿ 31ರ ವರೆಗಿನ ಪ್ರಯಾಣದ ಅವಧಿಯ ವರೆಗೂ ಆಫರ್ ಅನ್ವಯವಾಗಿರುತ್ತದೆ. ಈ ಹಿಂದೆ ಗೊ ಏರ್ ಹಾಗೂ ಇಂಡಿಗೊ ಸಹ 999 ರೂ.ಗಳಿಗೆ ವಿಮಾನಯಾನದ ಆಫರ್ ಘೋಷಿಸಿತ್ತು. 

ಹಾಗಿದ್ದರೂ ಇವೆಲ್ಲದರಿಂದ ಖಾಸಗಿ ಬಸ್ ಪ್ರಯಾಣಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಬಸ್ ಮಾಲಿಕರು ಅಭಿಪ್ರಾಯಪಟ್ಟಿದ್ದಾರೆ. ಅಗ್ಗದ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣ ತಲುಪಲು ಕ್ಯಾಬ್‌ಗಳಿಗಾಗಿ 800 ರೂ.ಗಳಿಂದ 1000 ರೂ. ಪಾವತಿಸಬೇಕು. ಹಾಗೆಯೇ ಪ್ರಯಾಣಕ್ಕೂ ಮುನ್ನ ಗಂಟೆಗಟ್ಟಲೆ ಟ್ರಾಫಿಕ್‌ ತೊಂದರೆಯು ತಪ್ಪಿದ್ದಲ್ಲ ಎಂದಿದೆ.