ಬೆಂಗಳೂರಿನಿಂದಲೇ ಚಾಲಕರಹಿತ ಕಾರು (ವಿಪ್ರೊ–ಐಐಎಸ್‌ಸಿ ಸಹಭಾಗಿತ್ವ)

0
14

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ವಿಪ್ರೊ ಕಂಪನಿಗಳು ಜತೆಯಾಗಿ ಚಾಲಕರಹಿತ ಕಾರು ಮತ್ತು ಲೋಹದ 3ಡಿ ಪ್ರಿಂಟಿಂಗ್‌ ಯಂತ್ರ ಅಭಿವೃದ್ಧಿಪಡಿಸುತ್ತಿರುವ ಮಾಹಿತಿಯನ್ನು ವಿಪ್ರೊ ಕಂಪನಿಯ ಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ
ಬಹಿರಂಗಪಡಿಸಿದ್ದಾರೆ.

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ವಿಪ್ರೊ ಕಂಪನಿಗಳು ಜತೆಯಾಗಿ ಚಾಲಕರಹಿತ ಕಾರು ಮತ್ತು ಲೋಹದ 3ಡಿ ಪ್ರಿಂಟಿಂಗ್‌ ಯಂತ್ರ ಅಭಿವೃದ್ಧಿಪಡಿಸುತ್ತಿರುವ ಮಾಹಿತಿಯನ್ನು ವಿಪ್ರೊ ಕಂಪನಿಯ ಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿಬಹಿರಂಗಪಡಿಸಿದ್ದಾರೆ.

ಸೆಪ್ಟೆಂಬರ್‌ 12 ರ ಗುರುವಾರ ನಡೆದ ಐಐಎಸ್‌ಸಿ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಭಾರತದ ಮಟ್ಟಿಗೆ ಮೊದಲ ಪ್ರಯತ್ನವಾಗಿರುವ ಈ ಯೋಜನೆಗಳು ಅಂತಿಮ ಹಂತದಲ್ಲಿವೆ. ಲೋಹದ 3ಡಿ ಮುದ್ರಣ ಯಂತ್ರವು ಸಂಯೋಜಿತ ಉತ್ಪಾದನೆ ಆಗಿರುತ್ತದೆ ಎಂದರು.

ಚಾಲಕರಹಿತ ಕಾರಿನ ಅಭಿವೃದ್ಧಿ ಇದೀಗ ಯಾವ ಹಂತಕ್ಕೆ ಬಂದಿದೆ ಎಂಬ ಬಗ್ಗೆ ಸುದ್ದಿಗಾರರು ಸ್ವತಃ ಅಜೀಂ ಪ್ರೇಮ್‌ಜಿ ಅವರಲ್ಲಿ ಸಮಾರಂಭದ ಕೊನೆಯಲ್ಲಿ ಕೇಳಿದರು. ಆದರೆ ಅವರು ‘ನೋ ಕಮೆಂಟ್ಸ್‌’ ಎಂದು ಉತ್ತರಿಸಿದರು. ಕಾರು ಅಭಿವೃದ್ಧಿಪಡಿಸುತ್ತಿರುವ ವಿಭಾಗದ ಮುಖ್ಯಸ್ಥರು ಸಹ ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗ ಅಸಾಧ್ಯ ಎಂದರು.
 
ಚಾಲಕರಹಿತ ಕಾರುಗಳು ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಓಡಾಡುತ್ತಿವೆ. ಸುಧಾರಿತ ನಿಯಂತ್ರಣ ವ್ಯವಸ್ಥೆ ಇಂತಹ ಕಾರುಗಳ ವೈಶಿಷ್ಟ್ಯ