ಬೆಂಗಳೂರಿನಲ್ಲಿ 10ನೇ ಆವೃತ್ತಿಯ “ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್”

0
38

ಎಂಬೆಸಿ ಇಂಟರ್‍ನ್ಯಾಷನಲ್ ರೈಡಿಂಗ್ ಶಾಲೆ (ಇಐಆರ್‍ಎಸ್) ಆಶ್ರಯದಲ್ಲಿ ಇದೇ ಜೂನ್ 29ರಿಂದ 10ನೇ ಆವೃತ್ತಿಯ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ.

ಬೆಂಗಳೂರು: ಎಂಬೆಸಿ ಇಂಟರ್‍ನ್ಯಾಷನಲ್ ರೈಡಿಂಗ್ ಶಾಲೆ (ಇಐಆರ್‍ಎಸ್) ಆಶ್ರಯದಲ್ಲಿ ಇದೇ ಜೂನ್ 29ರಿಂದ 10ನೇ ಆವೃತ್ತಿಯ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್  ನಡೆಯಲಿದೆ.  

ಟೂರ್ನಿಯ ಮೊದಲೆರಡು ದಿನಗಳಲ್ಲಿ ಬಲಾಢ್ಯ ತಂಡಗಳಾದ ಚೆನ್ನೈ ಈಕ್ವಿಟೇಷನ್ ಸೆಂಟರ್; ಫ್ಲೈಯಿಂಗ್ ಸೀ ಸ್ಟಾಲಿಯನ್, ಯುನೈಟೆಡ್ ರೈಡರ್ಸ್ ಬರ್ನ್, ಈಕ್ವೈನ್ ಡ್ರೀಮ್ಸ್, ಸೆಟಲ್ವಾಡ್ ಈಕ್ವೆಸ್ಟ್ರಿಯನ್, ಅಂಬೂರ್ ಈಕ್ವೆಸ್ಟ್ರಿಯನ್ ಕ್ಲಬ್, ರಾಯಲ್ ಈಕ್ವೆಸ್ಟ್ರಿಯನ್ ಅಕಾಡೆಮಿ, ರೆಡ್ ಅರ್ಥ್ ರೈಡಿಂಗ್ ಸ್ಕೂಲ್, ಬೆಂಗಳೂರು ಹಾರ್ಸ್ ರೈಡಿಂಗ್ ಸ್ಕೂಲ್, ಹೈ ಫೀಲ್ಡ್ ಈಕ್ವೆಸ್ಟ್ರಿಯನ್ ಸೆಂಟರ್ ನಂಥ ತಂಡಗಳು ಸ್ಪರ್ಧಿಸಲಿವೆ.

ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ  ಎಂಬೆಸಿ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಜಿತು ಮೆರ್ವಾನಿ ‘ಇಐಆರ್‍ಎಸ್ ಮತ್ತು ಈಪಿಎಲ್ ಮೂಲಕ ಕುದುರೆ ಸವಾರಿ ಆಟದ ಅಭಿಮಾನಿಗಳಿಗೆ ಆಟದ ಸೊಬಗನ್ನು ಕಣ್ತುಂಬಿಕೊಳ್ಳಲು ಬೆಂಬಲ ನೀಡುವುದರ ಜೊತೆಗೆ ಟೂರ್ನಿ ಆಯೋಜಿಸಲು ಹೆಮ್ಮೆ ಎನಿಸುತ್ತಿದೆ. ಭಾರತದಲ್ಲಿ ಕುದುರೆ ಸವಾರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈಪಿಎಲ್ ಮೂಲಕ ಪ್ರತಿವರ್ಷ ಸ್ಪರ್ಧಾತ್ಮಕತೆ ಹೆಚ್ಚಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೂರ್ನಿಗೆ ಪ್ರತಿಭಾವಂತರನ್ನು ಅಣಿಗೊಳಿಸುವ ಉದ್ದೇಶ ಇದೆ’ ಎಂದರು.

‘ಏಷ್ಯನ್ ಕ್ರೀಡಾಕೂಟದಲ್ಲಿನ ಗೆಲುವು ನಮ್ಮ ಹುಮ್ಮಸ್ಸು ಹೆಚ್ಚಿಸಿದೆ. 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ  ಪದಕ ಗೆಲ್ಲುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ” ಎಂದಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ 36 ವರ್ಷಗಳ ನಂತರ ರಜತ ಪದಕ ಗೆದ್ದ ಮೊದಲ ಭಾರತೀಯ ಎಂಬ ಸಾಧನೆಯನ್ನು ಫವ್ಹಾದ್ ಮಿರ್ಜಾ ಮಾಡಿದ್ದರು.