ಬೆಂಗಳೂರಿನಲ್ಲಿ ಇಂಟೆಲ್‌ 1,100 ಕೋಟಿ ರೂ. ಹೂಡಿಕೆ, 4500 ಉದ್ಯೋಗ ಸೃಷ್ಟಿ

0
256

ಮಹತ್ವದ ಬೆಳವಣಿಗೆಯಲ್ಲಿ ಹೆಸರಾಂತ ತಂತ್ರಜ್ಞಾನ ಕಂಪನಿ ಇಂಟೆಲ್‌, ಬೆಂಗಳೂರಿನಲ್ಲಿ ತನ್ನ ಎರಡನೇ ಅತಿ ದೊಡ್ಡ ಡಿಸೈನ್‌ ಸೆಂಟರ್‌ ಅನ್ನು ಆರಂಭಿಸಿದೆ. ಇದಕ್ಕಾಗಿ 1,100 ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಿದೆ.

ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ಹೆಸರಾಂತ ತಂತ್ರಜ್ಞಾನ ಕಂಪನಿ ಇಂಟೆಲ್‌, ಬೆಂಗಳೂರಿನಲ್ಲಿ ತನ್ನ ಎರಡನೇ ಅತಿ ದೊಡ್ಡ ಡಿಸೈನ್‌ ಸೆಂಟರ್‌ ಅನ್ನು ಆರಂಭಿಸಿದೆ. ಇದಕ್ಕಾಗಿ 1,100 ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಿದೆ. 
ಅಮೆರಿಕದ ಹೊರಗೆ ಇಂಟೆಲ್‌ನ ಅತಿ ದೊಡ್ಡ ಡಿಸೈನ್‌ ಸೆಂಟರ್‌ ಇದಾಗಿದ್ದು, 4,500 ಮಂದಿ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆ ಇದೆ. 

ಅಮೆರಿಕ ಮೂಲದ ಸೆಮಿಕಂಡಕ್ಟರ್‌ ದಿಗ್ಗಜ ಇಂಟೆಲ್‌, 5ಜಿ ನೆಟ್‌ವರ್ಕ್‌ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದು, ಈ ನಿಟ್ಟಿನಲ್ಲೂ ಹೊಸ ಕೇಂದ್ರ ಮಹತ್ವ ಪಡೆದುಕೊಳ್ಳಲಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿನ ಇಂಟೆಲ್‌ ಕಂಪನಿಯ 44 ಎಕರೆ ಪ್ರದೇಶದ ಕ್ಯಾಂಪಸ್‌ನಲ್ಲಿಯೇ ಹೊಸ ಡಿಸೈನ್‌ ಸೆಂಟರ್‌ ಅಸ್ತಿತ್ವಕ್ಕೆ ಬಂದಿದೆ. ವಿಶ್ವದರ್ಜೆಯ ಲ್ಯಾಬ್‌ ಮತ್ತು ಮೂಲ ಸೌಕರ್ಯವನ್ನು ಇದು ಒಳಗೊಂಡಿದೆ. ಕಂಪನಿ ಅಧಿಕೃತವಾಗಿ ಎಷ್ಟು ಮಂದಿಗೆ ಉದ್ಯೋಗ ನೀಡುವುದಾಗಿ ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ 4,500 ಮಂದಿಗೆ ಉದ್ಯೋಗಾವಕಾಶ ಸಿಗುವ ಅಂದಾಜಿದೆ. 

ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇಂಟೆಲ್‌ ಆದ್ಯತೆ ನೀಡಲಿದೆ. ಇಂಟೆಲ್‌ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥೆ ನಿವೃತಿ ರಾಯ್‌ ತಿಳಿಸಿದ್ದಾರೆ. ಕ್ಲೌಡ್‌, ಕ್ಲೈಂಟ್‌, ಗ್ರಾಫಿಕ್ಸ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, 5ಜಿ ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ ಇತ್ಯಾದಿ ವಲಯಗಳಲ್ಲಿ ಇಂಟೆಲ್‌ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.