ಬಿಲ್‌ ಗೇಟ್ಸ್‌ ಪೌಂಡೇಷನ್‌ನಿಂದ ನೂತನ ಟಾಯ್ಲೆಟ್‌ ಟೆಕ್ನಾಲಜಿ ಅಭಿವೃದ್ಧಿ!

0
425

ಇದು ಅಂತಿಂಥ ಟಾಯ್ಲೆಟ್‌ ಅಲ್ಲ, ಈ ಟಾಯ್ಲೆಟ್‌ಗೆ ಚರಂಡಿ ವ್ಯವಸ್ಥೆಯೇ ಇರುವುದಿಲ್ಲ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಶೌಚಗೃಹದ ಕೊರತೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಮೈಕ್ರೋಸಾಫ್ಟ್‌ ಸೃಷ್ಟಿಕರ್ತ ಬಿಲ್‌ ಗೇಟ್ಸ್‌ ವಿಭಿನ್ನ ಮಾದರಿಯ ಟಾಯ್ಲೆಟ್‌ ಪರಿಚಯ ಮಾಡಿದ್ದಾರೆ.

ಬೀಜಿಂಗ್‌: ಇದು ಅಂತಿಂಥ ಟಾಯ್ಲೆಟ್‌ ಅಲ್ಲ, ಈ ಟಾಯ್ಲೆಟ್‌ಗೆ ಚರಂಡಿ ವ್ಯವಸ್ಥೆಯೇ ಇರುವುದಿಲ್ಲ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಶೌಚಗೃಹದ ಕೊರತೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಮೈಕ್ರೋಸಾಫ್ಟ್‌ ಸೃಷ್ಟಿಕರ್ತ ಬಿಲ್‌ ಗೇಟ್ಸ್‌ ವಿಭಿನ್ನ ಮಾದರಿಯ ಟಾಯ್ಲೆಟ್‌ ಪರಿಚಯ ಮಾಡಿದ್ದಾರೆ.
ಬೀಜಿಂಗ್‌ನಲ್ಲಿ ನಡೆದ ಟಾಯ್ಲೆಟ್‌ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಬಿಲೆನಿಯರ್‌ ಬಿಲ್‌ ಗೇಟ್ಸ್‌ ಕಂಪನಿ ಚರಂಡಿ ವ್ಯವಸ್ಥೆಯೇ ಇಲ್ಲದ, ದೀರ್ಘಾವಧಿ ಬಾಳಿಕೆ ಬರುವ ಮಾಯಾವಿ ಟಾಯ್ಲೆಟ್‌ಅನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ತಿಳಿಸಿದ್ದಾರೆ. 
ನೂತನ ಮಾದರಿಯ ಟಾಯ್ಲೆಟ್‌ ಅಭಿವೃದ್ಧಿಯ ಸಂಶೋಧನೆಗಾಗಿ ಬಿಲ್‌ ಗೇಟ್ಸ್‌ ಬರೋಬ್ಬರಿ 200 ದಶಲಕ್ಷ ಡಾಲರ್‌ ವ್ಯಯಿಸಿದ್ದಾರೆ. ಪೂರ್ಣ ಸಿದ್ಧಗೊಳ್ಳಲು ಕನಿಷ್ಠ 200 ದಶಲಕ್ಷ ಡಾಲರ್‌ ಅನ್ನು ಮತ್ತೆ ಖರ್ಚು ಮಾಡಬೇಕಾದೀತು ಎಂದು ಅಂದಾಜಿಸಲಾಗಿದೆ. 

ಮಲದಲ್ಲಿ ರೋಗ ಹರಡುವ ಕ್ರಿಮಿಗಳು ಎಷ್ಟಿವೆ ಗೊತ್ತೆ? 
ಮಲದ ಮಾದರಿಯನ್ನು ತಂದಿದ್ದ ಬಿಲ್‌ ಗೇಟ್ಸ್‌, ಇದರಲ್ಲಿ 200 ಟ್ರಿಲಿಯನ್‌ ರೊಟಾವೈರಸ್‌ ಸೆಲ್‌ಗಳು, 20 ಬಿಲಿಯನ್‌ ಶಿಗೆಲ್ಲಾ ಬ್ಯಾಕ್ಟೀರಿಯಾಗಳು, 1 ಲಕ್ಷ ಪ್ಯಾರಾಸೈಟಿಕ್‌ ಹುಳಗಳ ಮೊಟ್ಟೆಗಳು ಇರುತ್ತವೆ. ಹೆಚ್ಚಿನ ಕಾಯಿಲೆಗಳಿಗೆ ಕಳಪೆ ಗುಣಮಟ್ಟದ ಟಾಯ್ಲೆಟ್‌ಗಳೇ ಕಾರಣ. ಪ್ರತೀ ವರ್ಷ 5 ವರ್ಷಕ್ಕಿಂತ ಕೆಳಗಿನ 50,000 ಮಕ್ಕಳು ಕಳಪೆ ನೈರ್ಮಲ್ಯ ವ್ಯವಸ್ಥೆಯಿಂದ ಸಾಯುತ್ತಿವೆ. ಕಳಪೆ ನೈರ್ಮಲ್ಯ ವ್ಯವಸ್ಥೆಯಿಂದಾಗಿ ವಿಶ್ವದಾದ್ಯಂತ ವಾರ್ಷಿಕ 200 ಬಿಲಿಯನ್‌ ಡಾಲರ್ ನಷ್ಟವಾಗುತ್ತಿದೆ. ಆದಾಯ ನಷ್ಟವಾಗುತ್ತಿದೆ ಎಂದು ಸಂಕ್ಷಿಪ್ತವಾಗಿ ವಿವರಿಸಿದರು. 

ನೂತನ ಟಾಯ್ಲೆಟ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ? 
ಸದ್ಯದ ಶೌಚಗೃಹದ ವ್ಯವಸ್ಥೆಯಲ್ಲಿ ಮಲವು ನೀರಿನಲ್ಲಿ ಹೊರಗೆ ಹೋಗುತ್ತದೆ. ಆದರೆ ಈ ಟಾಯ್ಲೆಟ್‌ಗೆ ನೀರಿನ ಮೂಲಕ ಹೊರಗೆ ಹೋಗುವ ವ್ಯವಸ್ಥೆಯೇ ಇರುವುದಿಲ್ಲ. ಹಾಗಾದರೆ ಮಲ ಏನಾಗುತ್ತದೆ? ಎಂಬ ಪ್ರಶ್ನೆಗೆ ಬಿಲ್‌ ಗೇಟ್ಸ್‌ ನೀಡುವ ಉತ್ತರ, ದ್ರವ ರೂಪ ಮತ್ತು ಘನ ರೂಪದ ಮಾನವ ತ್ಯಾಜ್ಯದ ಮೇಲೆ ರಾಸಾಯನಿಕ ಕೆಲಸ ನಡೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ತ್ಯಾಜ್ಯವು ಉರಿದು ಹೋಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇಲೆಕ್ಟ್ರೋಕೆಮಿಕಲ್‌ ಕಿಯಾಕ್ಟರ್‌ ಅಳವಡಿಸಲಾಗಿರುತ್ತದೆ. ಇದು ಮಾನವ ತ್ಯಾಜ್ಯವನ್ನು ತೋಟಗಳಿಗೆ ಬಳಸಬಹುದಾದ ಫಲವತ್ತಾದ ಗೊಬ್ಬರವನ್ನಾಗಿ ಪರಿವರ್ತಿಸುತ್ತದೆ. ಹೈಡೋಜನ್‌ ಇಂಧನವಾಗಿಯೂ ಪರಿವರ್ತನಗೊಳ್ಳುತ್ತದೆ. ಇದನ್ನು ಹಸಿರು ಇಂಧನವಾಗಿಯೂ ಬಳಸಬಹುದು. ನೂತನ ಟಾಯ್ಲೆಟ್‌ನಲ್ಲಿ ಫ್ಲಶ್‌ಗಾಗಿ ಸ್ವಲ್ಪ ನೀರು ಬಳಕೆಯಾಗುತ್ತದಂತೆ. ಜತಗೆ ಅದು ಮರು ಬಳಕೆಯಾಗುತ್ತದಂತೆ. 

ನೂತನ ಮಾದರಿ ಟಾಯ್ಲೆಟ್‌ಗಳು ದುಬಾರಿಯಾಗಿರುವುದರಿಂದ ಆರಂಭದಲ್ಲಿ ಆಸ್ಪತ್ರೆ, ಶಾಲೆ ಮತ್ತು ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ.