ಬಿಬಿಸಿ ಪ್ರಸಾರಕ “ಡೇವಿಡ್ ಅಟೆನ್‌ಬರೋಗೆ” 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

0
20

ಶಾಂತಿ, ನಿಶ್ಯಸ್ತ್ರೀಕರಣ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದ ವ್ಯಕ್ತಿಗಳಿಗೆ ನಿಡುವ 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಖ್ಯಾತ ನಿಸರ್ಗವಾದಿ, ಬಿಬಿಸಿ ಸುದ್ದಿಸಂಸ್ಥೆಯ ಪ್ರಸಾರಕರಾದ ಸರ್ ಡೇವಿಡ್ ಅಟೆನ್‌ಬರೋ ಆಯ್ಕೆಯಾಗಿದ್ದಾರೆ.

ನವದೆಹಲಿ: ಶಾಂತಿ, ನಿಶ್ಯಸ್ತ್ರೀಕರಣ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದ ವ್ಯಕ್ತಿಗಳಿಗೆ ನಿಡುವ 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಖ್ಯಾತ ನಿಸರ್ಗವಾದಿ, ಬಿಬಿಸಿ ಸುದ್ದಿಸಂಸ್ಥೆಯ ಪ್ರಸಾರಕರಾದ ಸರ್ ಡೇವಿಡ್ ಅಟೆನ್‌ಬರೋ ಆಯ್ಕೆಯಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಅಂತರರಾಷ್ಟ್ರೀಯ ತೀರ್ಪುಗಾರರ ತಂಡವು ಅಟೆನ್‌ಬರೋ ಅವರ ಹೆಸರನ್ನು ಆಯ್ಕೆ ಮಾಡಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ನವೆಂಬರ್ 19 ರ ಮಂಗಳವಾರ ಪ್ರಕಟಿಸಿದೆ.

“ನಮ್ಮ ಗ್ರಹದ, ಎಲ್ಲಾ ಜೀವಿಗಳ ಯೋಗಕ್ಷೇಮದ ಕುರಿತಂತೆ ಕಾಳಜಿ ಹೊಂದಿರುವ  ಕೆಲವೇ ವ್ಯಕ್ತಿಗಳ ಪೈಕಿ ಅಟೆನ್‌ಬರೋ ಅವರೊಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ” ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.

“ಮಾನವಕುಲವನ್ನು ಅಗತ್ಯಕ್ಕೆ ಜಾಗೃತಗೊಳಿಸಲು, ನಮ್ಮ ಗ್ರಹದಲ್ಲಿನ ಜೀವವೈವಿಧ್ಯತೆಯನ್ನು ಕಾಪಾಡಲು ಮತ್ತು ರಕ್ಷಿಸಲು, ಎಲ್ಲಾ ಜೀವಗಳೊಂದಿಗೆ ಸುಸ್ಥಿರ ಮತ್ತು ಸಾಮರಸ್ಯದಿಂದ ಬದುಕಲು ಸಹಕಾರಿಯಾಗುವಂತೆ ಅಟೆನ್‌ಬರೋ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ” ಟ್ರಸ್ಟ್‌ನ ಕಾರ್ಯದರ್ಶಿ ಸುಮನ್ ದುಬೆ, ಹೇಳಿದ್ದಾರೆ.

ಡೇವಿಡ್ ಅಟೆನ್‌ಬರೋ  

ಸರ್ ಡೇವಿಡ್ ಫ್ರೆಡೆರಿಕ್ ಅಟೆನ್‌ಬರೋ  ಒರ್ವ ಆಂಗ್ಲ ದೂರದರ್ಶನ ಪ್ರಸಾರಕ ಮತ್ತು ನೈಸರ್ಗಿಕ ಇತಿಹಾಸಜ್ಞ. ಅವರು ಬಿಬಿಸಿಯ ನ್ಯಾಚುರಲ್ ಹಿಸ್ಟರಿ ಯುನಿಟ್ ಸಂಯೋಗದೊಂದಿಗೆ ಮಾಡಿದ ಒಂಬತ್ತು ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರ ಸರಣಿಯಲ್ಲಿನ ಬರಹ ಮತ್ತು ನಿರೂಪಣೆಗೆ ಹೆಸರುವಾಸಿಯಾಗಿದ್ದಾರೆ. ಅವರು ಬಿಬಿಸಿಯ ಹಿರಿಯ ವ್ಯವಸ್ಥಾಪಕರಾಗಿದ್ದರು.

ಇವರ ಸಮಾಜ ಸೇವೆಗೆ ಮೆಚ್ಚಿ ಈ ಮುನ್ನ ಅನೇಕ ಪ್ರಶಸ್ತಿಗಳು ಲಭಿಸಿದ್ದು ಅವುಗಳಲ್ಲಿ 

# 2017: ಬ್ರಿಟಿಷ್-ಆಸ್ಟ್ರೇಲಿಯಾ ಸೊಸೈಟಿ ಪ್ರಶಸ್ತಿ ಬ್ರಿಟಿಷ್ / ಆಸ್ಟ್ರೇಲಿಯಾ ದ್ವಿಪಕ್ಷೀಯ ತಿಳುವಳಿಕೆ ಮತ್ತು ಸಂಬಂಧಗಳನ್ನು ಬಲಪಡಿಸುವ ಅತ್ಯುತ್ತಮ ಕೊಡುಗೆಗಾಗಿ
# 2017: ಮಾಸ್ಕೋ ಸೊಸೈಟಿ ಆಫ್ ನ್ಯಾಚುರಲಿಸ್ಟ್ಸ್ನ ಗೌರವಾನ್ವಿತ ಸದಸ್ಯ
# 2017: ರಾಯಲ್ ಕೆನೆಡಿಯನ್ ಜಿಯೋಗ್ರಾಫಿಕಲ್ ಸೊಸೈಟಿಯ ಚಿನ್ನದ ಪದಕ
# 2018: ಅತ್ಯುತ್ತಮ ನಿರೂಪಕರಿಗೆ ಪ್ರೈಮ್ಟೈಮ್ ಎಮ್ಮಿ ಪ್ರಶಸ್ತಿ ಗಳು ಪ್ರಮುಖವಾಗಿದೆ.