ಬಿಡಬ್ಲ್ಯುಎಫ್‌ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ : ಶ್ರೀಕಾಂತ್‌ಗೆ 8ನೇ ಶ್ರೇಯಾಂಕ

0
406

ಬಿಡಬ್ಲ್ಯುಎಫ್‌ ಮಾರ್ಚ್ 5 ರ ಮಂಗಳವಾರ ಬಿಡುಗಡೆಗೊಳಿಸಿದ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ 60,470 ಅಂಕಗಳೊಂದಿಗೆ 8ನೇ ಸ್ಥಾನ ಗಳಿಸಿದ್ದಾರೆ.

ಕೌಲಾಲಂಪುರ : ಬಿಡಬ್ಲ್ಯುಎಫ್‌ ಮಾರ್ಚ್ 5 ರ   ಮಂಗಳವಾರ ಬಿಡುಗಡೆಗೊಳಿಸಿದ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ 60,470 ಅಂಕಗಳೊಂದಿಗೆ 8ನೇ ಸ್ಥಾನ ಗಳಿಸಿದ್ದಾರೆ. 

ಜಪಾನ್‌ನ ಕೆಂಟೊ ಮೊಮೊಟಾ 1,04,750 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ, ಚೀನಾದ ಶಿಯೂಕಿ (87,422) ಹಾಗೂ ಚೈನೀಸ್‌ ತೈಪೆಯ ಚೌ ತಿಯೆನ್‌ ಚೆನ್‌ (79,874) ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಹಾಲಿ ಒಲಿಂಪಿಕ್‌ ಚಾಂಪಿಯನ್‌ ಮತ್ತು ಎರಡು ಬಾರಿಯ ವಿಶ್ವ ಚಾಂಪಿಯನ್‌ ಆಟಗಾರ ಚೀನಾದ ಚೆನ್‌ ಲಾಂಗ್‌ (75,138) 4ನೇ ಸ್ಥಾನಕ್ಕೆ ಸೀಮಿತಗೊಂಡರೆ, ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ (74,922) ಅವರಿಗೆ 5ನೇ ಸ್ಥಾನ ಪ್ರಾಪ್ತಿಯಾಗಿದೆ. ಶ್ರೀಕಾಂತ್‌ಗಿಂತ 10,824 ಅಂಕಗಳಷ್ಟು ಹೆಚ್ಚು ಗಳಿಸಿರುವ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ 6ನೇ ಸ್ಥಾನದಲ್ಲಿದ್ದಾರೆ.