“ಬಿಡದಿ”ಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಗರಿ

0
460

2018-19ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಬಿಡದಿ ಪುರಸಭೆ ಆಯ್ಕೆಯಾಗಿದೆ. ವೈಜ್ಞಾನಿಕ ವಿಧಾನ ಹಾಗೂ ತಂತ್ರಜ್ಞಾನ ಬಳಕೆ ಮೂಲಕ, ವೇಗವಾಗಿ ಕಸ ವಿಲೇವಾರಿ ಮಾಡುವ, ಸ್ವಚ್ಛತೆಯಲ್ಲಿ ಬದಲಾವಣೆ ಕಾಣುತ್ತಿರುವ ನಗರಗಳ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಜನಾಭಿಪ್ರಾಯದಂತೆ ಸ್ಥಳಿಯ ಸಂಸ್ಥೆಗಳಿಗೆ ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ನೀಡಲಾಗುತ್ತದೆ.

ಬಿಡದಿ(ರಾಮನಗರ): 2018-19ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಬಿಡದಿ ಪುರಸಭೆ ಆಯ್ಕೆಯಾಗಿದೆ. ವೈಜ್ಞಾನಿಕ ವಿಧಾನ ಹಾಗೂ ತಂತ್ರಜ್ಞಾನ ಬಳಕೆ ಮೂಲಕ, ವೇಗವಾಗಿ ಕಸ ವಿಲೇವಾರಿ ಮಾಡುವ, ಸ್ವಚ್ಛತೆಯಲ್ಲಿ ಬದಲಾವಣೆ ಕಾಣುತ್ತಿರುವ ನಗರಗಳ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಜನಾಭಿಪ್ರಾಯದಂತೆ ಸ್ಥಳಿಯ ಸಂಸ್ಥೆಗಳಿಗೆ ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ನೀಡಲಾಗುತ್ತದೆ.

ಈ ಅರ್ಹತಾ ಪಟ್ಟಿಯಲ್ಲಿ ಬಿಡದಿ ಪುರಸಭೆ 301ನೇ ರ್‍ಯಾಂಕ್‌  ಪಡೆದಿದೆ. ರಾಮನಗರ ಜಿಲ್ಲೆಯ ಇತರೆ ಎಲ್ಲಾ ನಗರಸಭೆ ಮತ್ತು ಪುರಸಭೆಗಳಿಗಿಂತ ಬಿಡದಿ ಹೆಚ್ಚು ಮತಗಳಿಸಿರುವುದು ಗಮನಾರ್ಹ. ರಾಮನಗರ ಮೂರು ನಗರಸಭೆ ಹಾಗೂ ಎರಡು ಪುರಸಭೆಗಳನ್ನು ಹೊಂದಿದ್ದು, ಒಟ್ಟು ಐದು ಸ್ಥಳೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪಟ್ಟಿಯಲ್ಲಿ ಬಿಡದಿ ಪುರಸಭೆ 1732 ಮತಗಳನ್ನು ಪಡೆದಿದೆ. 

ರಾಮನಗರ ನಗರಸಭೆ 1492 ಮತಗಳನ್ನು ಪಡೆಯುವ ಮೂಲಕ 337ನೇ ರ್‍ಯಾಂಕ್ ಪಡೆದು 2ನೇ ಸ್ಥಾನದಲ್ಲಿದೆ. ಕನಕಪುರ ನಗರಸಭೆ 1654 ಮತಗಳನ್ನು ಗಳಿಸುವ ಮೂಲಕ 385ನೇ ರ್‍ಯಾಂಕ್ ಪಡೆದು ತೃತೀಯ ಸ್ಥಾನದಲ್ಲಿದೆ. ಚನ್ನಪಟ್ಟಣ ನಗರಸಭೆ 1645 ಮತ ಪಡೆದು 399ನೇ ರ್‍ಯಾಂಕ್ ಗಳಿಸುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದೆ. ಮಾಗಡಿ ಪುರಸಭೆ 1532 ಮತಗಳನ್ನು ಪಡೆಯುವ ಮೂಲಕ 569ನೇ ರ್‍ಯಾಂಕ್ ಪಡೆದು ಐದನೇ ಸ್ಥಾನದಲ್ಲಿದೆ.

ಬಿಡದಿ ಪುರಸಭೆ ಪರಿವರ್ತನೆಗೊಂಡು ಗ್ರಾಮ ಪಂಚಾಯಿತಿ ಮಟ್ಟದಿಂದ ಮೇಲ್ದರ್ಜೆಗೆ ಏರಿ ಪುರಸಭೆಯಾಗಿ ಮೂರು ವರ್ಷಗಳ ಹಿಂದಷ್ಟೇ ಬಡ್ತಿ ಪಡೆದಿದೆ. 

ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ವಿ.ಕೊಳವಿ ಮಾತನಾಡಿ ‘ರಾಷ್ಟ್ರಮಟ್ಟದ ಸ್ವಚ್ಚತಾ ಸರ್ವೇಕ್ಷಣಾ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಬಿಡದಿ ಪುರಸಭೆ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿರುವುದು ಖುಷಿ ವಿಚಾರ. ಇದಕ್ಕೆ ಮತಚಲಾಯಿಸಿದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ತಿಳಿಸಿದರು.

ಪ್ರಶಸ್ತಿ ಆಯ್ಕೆ ವಿಧಾನ

ರಾಷ್ಟ್ರಮಟ್ಟದ ಸ್ವಚ್ಚ ಸರ್ವೇಕ್ಷಣಾ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಜನಾಭಿಪ್ರಾಯ ಸಂಗ್ರಹದ ಮೂಲಕ ನಡೆಯುತ್ತದೆ. ಸ್ಥಳೀಯ ಸಂಸ್ಥೆಗಳ ಮೂಲ ಸೌಕರ್ಯಗಳ ನಿರ್ವಹಣೆ ಪರಿಶೀಲನೆ, ಸಾರ್ವಜನಿಕ ಮಾಹಿತಿ ಸಂಗ್ರಹ, ಆನ್‌ಲೈನ್‌ ಮೂಲಕ ಜನಾಭಿಪ್ರಾಯ ಸಂಗ್ರಹ ನಡೆಯುತ್ತದೆ.ಪಟ್ಟಣದ ತ್ಯಾಜ್ಯ ವಿಲೇವಾರಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸಂಘ ಸಂಸ್ಥೆ ಅಧಿಕಾರಿಗಳು ಜನರಲ್ಲಿ ಮತಯಾಚನೆ ಮಾಡುತ್ತಾರೆ.

ಇಷ್ಟೆಲ್ಲಾ ಪ್ರಕ್ರಿಯೆಗಳ ನಂತರ ನಾಗರಿಕರಿಂದ ಚಲಾವಣೆಗೊಂಡ ಮತಗಳ ಆಧಾರದ ಮೇಲೆ ರ್‍ಯಾಂಕ್ ನಿಗದಿ ಮಾಡಲಾಗುತ್ತದೆ.