ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆ: ರಾಜ್ಯಸಭಾ ನಾಯಕರಾಗಿ ತಾವರ್​ ಚಂದ್​ ಗೆಹ್ಲೋಟ್​ ಆಯ್ಕೆ

0
21

ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ಇದರ ಅನ್ವಯ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ಪಕ್ಷದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿಯವರು ಇರುತ್ತಾರೆ. ಹಾಗೇ ಉಪನಾಯಕರಾಗಿ ರಾಜನಾಥ್​ ಸಿಂಗ್​ ನೇಮಕಗೊಂಡಿದ್ದಾರೆ.

ನವದೆಹಲಿ: ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ಇದರ ಅನ್ವಯ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ಪಕ್ಷದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿಯವರು ಇರುತ್ತಾರೆ. ಹಾಗೇ ಉಪನಾಯಕರಾಗಿ ರಾಜನಾಥ್​ ಸಿಂಗ್​ ನೇಮಕಗೊಂಡಿದ್ದಾರೆ.

ಹಾಗೇ ರಾಜ್ಯಸಭೆ ಬಿಜೆಪಿ ನಾಯಕರಾಗಿ ತಾವರ್​ಚಂದ್​ ಗೆಹ್ಲೋಟ್​ ಮತ್ತು ಪಿಯೂಷ್​ ಗೋಯಲ್​ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ರಾಜನಾಥ್​ ಸಿಂಗ್ ಅವರು ಕಳೆದ ಬಾರಿ ಗೃಹ ಖಾತೆ ನಿರ್ವಹಿಸಿದ್ದರು. ಈ ಬಾರಿ ರಕ್ಷಣಾ ಸಚಿವರಾಗಿದ್ದಾರೆ. ತಾವರ್​ ಚಂದ್​ ಗೆಹ್ಲೋಟ್​ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಮತ್ತು ಪಿಯೂಷ್​ ಗೋಯಲ್​ ಅವರು ರೈಲ್ವೆ ಮತ್ತು ವಾಣಿಜ್ಯ ಇಲಾಖೆ ಸಚಿವರು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರುಣ್ ಜೇಟ್ಲಿಯವರು ರಾಜ್ಯಸಭಾ ನಾಯಕರಾಗಿದ್ದರು. ಆದರೆ, ಈ ಬಾರಿ ಅನಾರೋಗ್ಯ ಕಾರಣದಿಂದ ಚುನಾವಣೆಯಿಂದಲೇ ದೂರವುಳಿದಿದ್ದಾರೆ. ಈಗ ರಾಜ್ಯಸಭಾ ನಾಯಕರಾಗಿ ಆಯ್ಕೆಯಾಗಿರುವ ತಾವರ್​ಚಂದ್​ ಗೆಹ್ಲೋಟ್​ ಅವರು, 2012ರಿಂದಲೂ ರಾಜ್ಯಸಭೆ ಸದಸ್ಯರಾಗಿದ್ದವರು. ಇನ್ನು ಪಿಯೂಷ್​ ಗೋಯಲ್​ ಕಳೆದ ಸರ್ಕಾರದಲ್ಲಿ 2017ರಿಂದ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಅರುಣ್​ ಜೇಟ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಹೋದಾಗ ಹಣಕಾಸು ಖಾತೆಯನ್ನೂ ನಿರ್ವಹಿಸಿ, ಕೊನೇ ವರ್ಷದ ಬಜೆಟ್​ ಕೂಡ ಮಂಡನೆ ಮಾಡಿದ್ದರು.