ಬಾಹ್ಯಾಕಾಶ ಸೇರಲಿರುವ ‘ನ್ಯಾವ್ಐಸಿ’ಯ 8ನೇ ಉಪಗ್ರಹ

0
19

‘ನ್ಯಾವ್ಐಸಿ’ ಪಥದರ್ಶಕ ಉಪಗ್ರಹ ಸಮೂಹದ ಭಾಗವಾಗಿ ಎಂಟನೇ ಉಪಗ್ರಹದ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಿದ್ಧವಾಗಿದೆ.

ಗುರುವಾರ ಬೆಳಗಿನ ಜಾವ 4 ಗಂಟೆ 4 ನಿಮಿಷಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ–ಸಿ41/ಐಆರ್‌ಎನ್‌ಎಸ್ಎಸ್–1ಐ ಉಡಾವಣೆ ನಡೆಯಲಿದೆ. ಇದು ಐಆರ್‌ಎನ್‌ಎಸ್ಎಸ್–1ಎ ಉಪಗ್ರಹಕ್ಕೆ ಪರ್ಯಾಯವಾಗುವ ನಿರೀಕ್ಷೆ ಇದೆ.

ಐಆರ್‌ಎನ್‌ಎಸ್ಎಸ್–1ಎ ಈವರೆಗೆ ಉಡಾವಣೆ ಮಾಡಲಾದ ಏಳು ಉಪಗ್ರಹಗಳ ಪೈಕಿ ಮೊದಲನೆಯದ್ದು. ರೂಬಿಡಿಯಂ ಪರಮಾಣು ಗಡಿಯಾರ ನಿಷ್ಕ್ರಿಯಗೊಂಡ ಕಾರಣ ಈ ಉಪಗ್ರಹ ಕಾರ್ಯನಿರ್ವಹಿಸಲು ವಿಫಲವಾಗಿದೆ. ಈಗ ಪರ್ಯಾಯ ಉಪಗ್ರಹ ಉಡಾವಣೆಯ ಎರಡನೇ ಪ್ರಯತ್ನ ನಡೆಯಲಿದೆ.

ಕಳೆದ ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗಿದ್ದ ಮೊದಲ ಪರ್ಯಾಯ ಉಪಗ್ರಹ ‘ಐಆರ್‌ಎನ್‌ಎಸ್ಎಸ್–1ಎಚ್’ದಿಂದ ಉಷ್ಣ ನಿರೋಧಕ ಕವಚವು ಕಳಚಿಕೊಳ್ಳದ ಕಾರಣ ಆ ಪ್ರಯತ್ನ ಸಫಲವಾಗಿರಲಿಲ್ಲ.