ಬಾಹ್ಯಾಕಾಶ ನಡಿಗೆ: ಮಹಿಳಾ ಗಗನಯಾತ್ರಿಗಳ ದಾಖಲೆ

0
16

ಅಂತರರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದಿರುವ ಇಬ್ಬರು ಮಹಿಳಾ ಗಗನಯಾತ್ರಿಕರು ಮೂರು ದಿನಗಳ ಬಾಹ್ಯಾಕಾಶ ನಡಿಗೆಯನ್ನು ಆರಂಭಿಸಿದ್ದಾರೆ.

ಕೇಪ್‌ ಕೆನವರೆಲ್‌ (ಎಪಿ): ಅಂತರರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದಿರುವ ಇಬ್ಬರು ಮಹಿಳಾ ಗಗನಯಾತ್ರಿಕರು ಮೂರು ದಿನಗಳ ಬಾಹ್ಯಾಕಾಶ ನಡಿಗೆಯನ್ನು ಆರಂಭಿಸಿದ್ದಾರೆ.

ನಾಸಾ ಇದನ್ನು ಐತಿಹಾಸಿಕ ಎಂದು ಬಣ್ಣಿಸಿದೆ (HIStory ಬದಲು HERstory). ಗಗನಯಾತ್ರಿಗಳಾದ ಕ್ರಿಸ್ಟಿನಾ ಕೋಚ್ ಮತ್ತು ಜೆಸ್ಸಿಕಾ ಮೇರ್‌ ಅವರಿರುವ ತಂಡ, ನಿಲ್ದಾಣದ ದುರಸ್ತಿ ಕಾರ್ಯವನ್ನು ಅಕ್ಟೋಬರ್ 18 ರ ಶುಕ್ರವಾರ ಆರಂಭಿಸಿದ್ದು, ಬಾಹ್ಯಾಕಾಶ ನಡಿಗೆ ಕೈಗೊಂಡ ಮೊದಲ ಮಹಿಳಾ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ.  

ಕ್ರಿಸ್ಟಿನಾ ಕೋಚ್‌ ಅವರು 14ನೇ ಮಹಿಳಾ ಗಗನಯಾತ್ರಿ ಆಗಿದ್ದು, ಈಗಾಗಲೇ ಮೂರು ಬಾರಿ ನಡಿಗೆಯನ್ನು ಕೈಗೊಂಡಿದ್ದಾರೆ. ಜೆಸ್ಸಿಕಾ ಮೇರ್‌ 15ನೇ ಮಹಿಳೆಯಾಗಿದ್ದಾರೆ.  

ಮಹಿಳಾ ಗಗನಯಾತ್ರಿಗಳೇ ನಡೆಸುವ ಈ ಸ್ಪೇಸ್ ವಾಕ್​ ಏಳು ತಿಂಗಳ ಮೊದಲೇ ನಡೆಯಬೇಕಾಗಿತ್ತು. ಆದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಒಂದೇ ಒಂದು ಮೀಡಿಯಂ ಸೈಝ್​ನ ಸ್ಪೇಸ್​​ಸ್ಯೂಟ್ ಇದ್ದ ಕಾರಣ ಯೋಜನೆಯನ್ನು ಮುಂದೂಡಿತು. ಎರಡನೇ ಸ್ಪೇಸ್​ ಸ್ಯೂಟನ್ನು ಈ ತಿಂಗಳು ಅಲ್ಲಿಗೆ ರವಾನಿಸಿದ್ದು, ಇದೀಗ ಇಬ್ಬರು ಮಹಿಳಾ ಗಗನ ಯಾತ್ರಿಗಳು ಸ್ಪೇಸ್ ವಾಕ್ ಆರಂಭಿಸಿದ್ದಾರೆ.