ಬಾಹುಬಲಿ ಮೂರ್ತಿಗೆ ಮಹಾಮಜ್ಜನ

0
36

ವಿಂಧ್ಯಗಿರಿ ಬೆಟ್ಟದ ಮೇಲೆ ಮಂದಸ್ಮಿತನಾಗಿ ನಿಂತು ವಿಶ್ವಕ್ಕೆ ಶಾಂತಿ ಸಂದೇಶ ಸಾರುತ್ತಿರುವ ಬಾಹುಬಲಿ ಮೂರ್ತಿಗೆ ಶನಿವಾರ (ಫೆ. 17) 88ನೇ ಮಹಾಮಜ್ಜನದ ಸಂಭ್ರಮ.

ವಿಂಧ್ಯಗಿರಿ ಬೆಟ್ಟದ ಮೇಲೆ ಮಂದಸ್ಮಿತನಾಗಿ ನಿಂತು ವಿಶ್ವಕ್ಕೆ ಶಾಂತಿ ಸಂದೇಶ ಸಾರುತ್ತಿರುವ ಬಾಹುಬಲಿ ಮೂರ್ತಿಗೆ ಶನಿವಾರ (ಫೆ. 17) 88ನೇ ಮಹಾಮಜ್ಜನದ ಸಂಭ್ರಮ. 58.8 ಅಡಿ ಎತ್ತರದ ಏಕಶಿಲಾ ಮೂರ್ತಿಗೆ ಇಂದು ಮಧ್ಯಾಹ್ನ ಎರಡು ಗಂಟೆಗೆ ಮಹಾಮಜ್ಜನ ಆರಂಭವಾಗಿದೆ. ಸಂಜೆ 6 ಗಂಟೆ ವರೆಗೆ ಮಹಾಮಜ್ಜನ ನೆರವೇರಲಿದೆ.

ಜೈನಕಾಶಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಂಧ್ಯಗಿರಿ ಬೆಟ್ಟವನ್ನೇರವಲು ಡೋಲಿ ನಿರಾಕರಿಸಿ 708 ಮೆಟ್ಟಲುಗಳನ್ನು ಹತ್ತಿ  ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಈ ಬಾರಿಯೂ ಪಾಟ್ನಿಗೆ ಪ್ರಥಮ ಕಳಶ
2006ರ ಮಹಾಮಸ್ತಕಾಭಿಷೇಕದಲ್ಲಿ ಪ್ರಥಮ ದಿನದ ಕಳಶ ₹ 1.8 ಕೋಟಿಗೆ ಹರಾಜಾಗಿತ್ತು. ರಾಜಸ್ಥಾನದ ಆರ್‌.ಕೆ.ಮಾರ್ಬಲ್ಸ್‌ನ ಮಾಲೀಕ ಅಶೋಕ್ ಪಾಟ್ನಿ ಪ್ರಥಮ ಕಳಶ ಖರೀದಿಸಿದ್ದರು. ಈ ಬಾರಿಯೂ ಪ್ರಥಮ ಅಭಿಷೇಕದ ಕಳಶವನ್ನು ಪಾಟ್ನಿ ಅವರೇ ₹11.6 ಕೋಟಿ ನೀಡಿ ಖರೀದಿಸಿದ್ದಾರೆ. ಫೆ. 18ರಿಂದ ಫೆ. 25ರ ವರೆಗೆ ಪ್ರತಿ ದಿನ 1,008 ಕಲಶಗಳಿಂದ ಅಭಿಷೇಕ ನಡೆಯುತ್ತದೆ. ಈ ಕಲಶಗಳು ಕನಿಷ್ಠ ₹ 5 ಸಾವಿರದಿಂದ ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆ.

ಮೊದಲ ಮಜ್ಜನ

ಶಾಸನಗಳಲ್ಲಿ ಕ್ರಿ.ಶ. 1398ರಲ್ಲಿ ನಡೆದ ಮೊದಲ ಮಸ್ತಕಾಭಿಷೇಕದ ಉಲ್ಲೇಖ ಸಿಗುತ್ತದೆ. ನಂತರ 1612, 1659, 1677, 1800, 1875, 1887 ನಡೆದ ಉಲ್ಲೇಖಗಳು ಲಭ್ಯವಾಗಿವೆ. ಇತ್ತೀಚೆಗೆ ನಡೆದದ್ದು 2006ರಲ್ಲಿ.

ಫೆ. 17ರ ಕಾರ್ಯಕ್ರಮ

ಬೆಳಿಗ್ಗೆ 5ರಿಂದ 2ರ ವರೆಗೆ: ಧಾರ್ಮಿಕ ವಿಧಿ, ವಿಧಾನ, ತ್ಯಾಗಿಗಳು, ಕಳಶಧಾರಿಗಳು ಆಸೀನರಾಗುವುದು

ಮಧ್ಯಾಹ್ನ 2ರಿಂದ 3.30: 108 ಕಳಶಾಭಿಷೇಕ (ಜಲಾಭಿಷೇಕ)

3.30ರಿಂದ 5.30: ಪಂಚಾಮೃತ ಅಭಿಷೇಕ

5.30ರಿಂದ 6: ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿ

6.30ರಿಂದ 9.30: ಸಾರ್ವಜನಿಕರಿಗೆ ದರ್ಶನ

ಫೆ. 18ರಿಂದ 25ರ ವರೆಗೆ ಕಾರ್ಯಕ್ರಮ

ಬೆಳಗ್ಗೆ 8ರಿಂದ 11: 1008 ಕಳಶಾಭಿಷೇಕ (ಜಲಾಭಿಷೇಕ)

11ರಿಂದ 1: ಪಂಚಾಮೃತ ಅಭಿಷೇಕ

1ರಿಂದ 1.30: ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿ

2ರಿಂದ 9.30: ಸಾರ್ವಜನಿಕರಿಗೆ ದರ್ಶನ ಅವಕಾಶ

ಪಂಚಾಮೃತ ಅಭಿಷೇಕದ ದ್ರವ್ಯಗಳು
ಜಲಾಭಿಷೇಕ
ಎಳನೀರು
ಕಬ್ಬಿನ ರಸ, ಕ್ಷೀರ
ಶ್ವೇತ ಕಲ್ಕಚೂರ್ಣ
ಅರಿಸಿಣ
ಗಿಡಮೂಲಿಕೆ ಕಷಾಯ
ಪ್ರಥಮ ಕೋನ ಕಳಶ
ದ್ವಿತೀಯ ಕೋನ ಕಳಶ
ತೃತೀಯ ಕೋನ ಕಳಶ
ಚತುರ್ಥ ಕೋನ ಕಳಶ
ಶ್ರೀಗಂಧ, ಚಂದನ
ಅಷ್ಟಗಂಧ, ಕೇಸರ ವೃಷ್ಟಿ
ರಜತ ವೃಷ್ಟಿ, ಸುವರ್ಣ ವೃಷ್ಟಿ
ಪುಷ್ಪ ವೃಷ್ಟಿ, ಪೂರ್ಣ ಕುಂಭ
ಇಂದ್ರ, ಅಷ್ಟದ್ರವ್ಯ ಪೂಜೆ
ಮಹಾಮಂಗಳಾರತಿ

ಕಳಶಗಳ ವಿವರ
# ಜನಹಿತ
# ನವರತ್ನ
ರತ್ನ
ಸ್ವರ್ಣ
ದಿವ್ಯ
ರಜತ
ತಾಮ್ರ
ಕಂಚು
ಶುಭಮಂಗಳ
ಮಂಗಳ
ಗುಳ್ಳಕಾಯಜ್ಜಿ