ಬಾಲಿವುಡ್ ನಟ, ನಿರ್ದೇಶಕ ನೀರಜ್ ವೊರಾ ನಿಧನ

0
24

ಬಾಲಿವುಡ್ ನಟ ಹಾಗೂ ನಿರ್ದೇಶಕ ನೀರಜ್ ವೊರಾ(54) ಬಹು ಅಂಗಾಂಗ ವೈಫಲ್ಯದ ಕಾರಣ ಇಲ್ಲಿನ ಕ್ರಿಟಿ ಕೇರ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

2016ರಲ್ಲಿ ನೀರಜ್ ವೊರಾಗೆ ಹೃದಯಾಘಾತವಾಗಿತ್ತು. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ದಿನಗಳಿಂದ ಕೋಮಾದಲ್ಲಿದ್ದರು. ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ವೋರಾ ನಿಧನದ ಬಗ್ಗೆ ಬಾಲಿವುಡ್ ನಟ ಪರೇಶ್ ರಾವಲ್ ಆವರು ಟ್ವೀಟ್ ಮಾಡಿದ್ದಾರೆ.

ಮೂಲತಃ ಗುಜರಾತ್‌ನವರಾದ ವೊರಾ ರಂಗೀಲಾ, ಫಿರ್ ಹೆರಾ ಫೇರಿ, ಹೆರಾ ಫೇರಿ, ಅಕೇಲೇ ಹಮ್ ಅಕೇಲೇ ತುಮ್, ಜೋಶ್, ಬಾದ್‌ಶಾ, ಚೋರಿ ಚೋರಿ ಚುಪ್ಕೆ ಚುಪ್ಕೆ, ಅಜ್ನಬಿ ಇನ್ನಿತರ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದರು. ಕಿಲಾಡಿ 420, ಫಿರ್ ಹೆರಾ ಫೇರಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.