ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಪಾಕಿಸ್ತಾನದಿಂದ ವಿಶ್ವಸಂಸ್ಥೆಗೆ ದೂರು!

0
36

ಇತ್ತೀಚೆಗೆ ಕಾಶ್ಮೀರ ಕುರಿತು ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವಸಂಸ್ಥೆಯ ಶಾಂತಿ ಸೌಹಾರ್ದ ರಾಯಭಾರಿಯಾರಿಯಾಗಿರುವ ಭಾರತೀಯ ಚಿತ್ರತಾರೆ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ.

ಇತ್ತೀಚೆಗೆ ಕಾಶ್ಮೀರ ಕುರಿತು ಭಾರತ ಸರ್ಕಾರ  ತೆಗೆದುಕೊಂಡ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವಸಂಸ್ಥೆಯ ಶಾಂತಿ ಸೌಹಾರ್ದ ರಾಯಭಾರಿಯಾರಿಯಾಗಿರುವ ಭಾರತೀಯ ಚಿತ್ರತಾರೆ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ. ಭಾರತದ ಸಾಂಪ್ರದಾಯಿಕ ವೈರಿ ನೆರೆರಾಷ್ಟ್ರ ಈ ಸಂಬಂಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದೆ.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಹೆಚ್. ಫೊರೆ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಬಾಲಿವುಡ್ ನಟ ಕಾಶ್ಮೀರ ಕುರಿತು ಭಾರತ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತಾರೆ ಚೋಪ್ರಾ ಭಾರತ ಮತ್ತು ಪಾಕಿಸ್ತಾನದ ನಡುವಿನ “ಪರಮಾಣು ಯುದ್ಧ” ದ ಪರವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮಿಸ್ ಚೋಪ್ರಾ ಅವರು ಈ ಭಾರತೀಯ ಸರ್ಕಾರದ ನಿರ್ಧಾರವನ್ನು ಸಾರ್ವಜನಿಕವಾಗಿ ಅನುಮೋದಿಸಿದ್ದಾರೆ. ಭಾರತೀಯ ರಕ್ಷಣಾ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಪರಮಾಣು ಬೆದರಿಕೆಯನ್ನು ಸಹ ಬೆಂಬಲಿಸಿದ್ದಾರೆ. ಇದೆಲ್ಲವೂ ಶಾಂತಿ ಮತ್ತು ಸೌಹಾರ್ದತೆಯ ತತ್ವಗಳಿಗೆ ವಿರುದ್ಧವಾಗಿದೆ. , “ಮಜಾರಿ ಪತ್ರದಲ್ಲಿ ಬರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೂಲಕ ಸಂವಿಧಾನದ 370 ನೇ ವಿಧಿಯನ್ನು ಭಾರತ ರದ್ದುಪಡಿಸಿ ಕಾಶ್ಮೀರವನ್ನು  ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಹೆಚ್ಚಿದೆ. ಇದೀಗ ಶಾಂತಿ ಸೌಹಾರ್ದತೆ ರಾಯಭಾರಿ ಸ್ಥಾನದಿಂದ ಚೋಪ್ರಾ ಅವರನ್ನು ತೆಗೆದು ಹಾಕದೆ ಹೋದರೆ ಇದೊಂದು “ಜಾಗತಿಕ ಅಪಹಾಸ್ಯ” ಆಗಲಿದೆ ಎಂದು ಪಾಕ್ ಸಚಿವರು ಹೇಳಿದ್ದಾರೆ