ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ 1398 ರೈತರ ಸಾಲ ಮರುಪಾವತಿಗೆ ಸಹಾಯ

0
363

ಬಾಲಿವುಡ್‌ನ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರು ಉತ್ತರ ಪ್ರದೇಶದ 1398 ರೈತರ ಸಾಲ ಮರುಪಾವತಿಗೆ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಬಚ್ಚನ್‌ ಅವರು ಮಹಾರಾಷ್ಟ್ರದ 350 ರೈತರ ಸಾಲ ಮರುಪಾವತಿಗೆ ಸಹಾಯ ಮಾಡಿದ್ದರು.

ಮುಂಬಯಿ: ಬಾಲಿವುಡ್‌ನ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರು ಉತ್ತರ ಪ್ರದೇಶದ 1398 ರೈತರ ಸಾಲ ಮರುಪಾವತಿಗೆ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಬಚ್ಚನ್‌ ಅವರು ಮಹಾರಾಷ್ಟ್ರದ 350 ರೈತರ ಸಾಲ ಮರುಪಾವತಿಗೆ ಸಹಾಯ ಮಾಡಿದ್ದರು. 

ನವೆಂಬರ್ 19 ರ ಸೋಮವಾರ ರಾತ್ರಿ ಬ್ಲಾಗ್‌ನಲ್ಲಿ ಈ ಸಂಗತಿಯನ್ನು ಬರೆದುಕೊಂಡಿರುವ 76 ವರ್ಷದ ಬಚ್ಚನ್‌, ಆಯ್ದ 70 ರೈತರಿಗೆ ವೈಯಕ್ತಿಕವಾಗಿ ಬ್ಯಾಂಕ್‌ನ ಸಾಲಮರುಪಾವತಿ ಪತ್ರಗಳನ್ನು ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ರೈತರನ್ನು ಉತ್ತರ ಪ್ರದೇಶದಿಂದ ಮುಂಬಯಿಗೆ ಕರೆಸಿಕೊಳ್ಳಲಿದ್ದಾರೆ. ಈ ಕೊಡುಗೆಯ ಮೂಲಕ ಅವರು ಪಾವತಿಸಿರುವ ಸಾಲ ಮೊತ್ತ ಸುಮಾರು 4.05 ಕೋಟಿ ರೂ. 

”ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು,” ಎಂದು ಅವರು ಬರೆದುಕೊಂಡಿದ್ದಾರೆ.