ಬಾಬಾ ರಾಮದೇವ್ ಮತ್ತು ಸಾಲುಮರದ ತಿಮ್ಮಕ್ಕಳಿಗೆ ಪ್ರಶಸ್ತಿ ಪ್ರಧಾನ

0
31

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ಹಾಗೂ ದಸರಾ ಉತ್ಸವದ ಅಂಗವಾಗಿ ನೀಡುವ ‘ರೇಣುಕ ಶ್ರೀ’ ಪ್ರಶಸ್ತಿಗೆ ಯೋಗಗುರು ಬಾಬಾ ರಾಮದೇವ್‌ ಮತ್ತು ‘ಮಹಾಮಾತಾ’ ಪ್ರಶಸ್ತಿಗೆ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ಹಾಗೂ ದಸರಾ ಉತ್ಸವದ ಅಂಗವಾಗಿ ನೀಡುವ ‘ರೇಣುಕ ಶ್ರೀ’ ಪ್ರಶಸ್ತಿಗೆ ಯೋಗಗುರು ಬಾಬಾ ರಾಮದೇವ್‌ ಮತ್ತು ‘ಮಹಾಮಾತಾ’ ಪ್ರಶಸ್ತಿಗೆ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಕ್ರಮವಾಗಿ ₹ 1 ಲಕ್ಷ ಹಾಗೂ ₹ 25 ಸಾವಿರ ನಗದು ಒಳಗೊಂಡಿದೆ.

‘ಉತ್ಸವ ಇದೇ ಸೆಪ್ಟೆಂಬರ್ 21ರಿಂದ 30ರವರೆಗೆ ಹುಕ್ಕೇರಿಯ ಎಸ್.ಕೆ. ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ. 25ರಂದು ರೇಣುಕಶ್ರೀ ಹಾಗೂ 27ರಂದು ಮಹಾಮಾತಾ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮಠದಲ್ಲಿ ನಡೆಯುವ ದಸರಾ ಉತ್ಸವದ ಸಿದ್ಧತೆಯಲ್ಲಿ ತಾವು ನಿರತರಾಗಿದ್ದು, ಇತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯ ಇಲ್ಲ. ಉತ್ಸವಕ್ಕೆ ವಿರಕ್ತ, ಅದ್ವೈತ ಸೇರಿ ಎಲ್ಲ ಪರಂಪರೆಯ ಮಠಾಧೀಶರನ್ನೂ ಆಹ್ವಾನಿಸಿದ್ದಾಗಿ ಸ್ವಾಮೀಜಿ ತಿಳಿಸಿದರು.