ಬಾಬರಿ ಮಸೀದಿ ಧ್ವಂಸ ಇಂದಿಗೆ 26 ವರ್ಷ

0
746

ಬಾಬರಿ ಮಸೀದಿ ಧ್ವಂಸಗೊಂಡು ಡಿ.6ಕ್ಕೆ 26 ವರ್ಷ. ಈ ವರ್ಷಾಚರಣೆ ಅಂಗ ವಾಗಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಯೋಧ್ಯೆಯಲ್ಲಿ ಗುರು ವಾರ (ಡಿಸೆಂಬರ್‌ 6) ಶೌರ್ಯ ದಿನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಸ್ಲಿಂ ಸಂಘಟನೆಗಳು ಕರಾಳ ದಿನ ಆಚರಣೆಗೆ ನಿರ್ಧರಿಸಿವೆ.

ಅಯೋಧ್ಯೆ (ಪಿಟಿಐ): ಬಾಬರಿ ಮಸೀದಿ ಧ್ವಂಸಗೊಂಡು 2018 ಡಿಸೆಂಬರ್.6ಕ್ಕೆ 26 ವರ್ಷ. ಈ ವರ್ಷಾಚರಣೆ ಅಂಗ ವಾಗಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಯೋಧ್ಯೆಯಲ್ಲಿ ಗುರು ವಾರ (ಡಿಸೆಂಬರ್‌ 6) ಶೌರ್ಯ ದಿನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಸ್ಲಿಂ ಸಂಘಟನೆಗಳು ಕರಾಳ ದಿನ ಆಚರಣೆಗೆ ನಿರ್ಧರಿಸಿವೆ. 

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಎಲ್ಲ ಪಕ್ಷಗಳ ದೃಷ್ಟಿ ಅಯೋಧ್ಯೆ ಕಡೆಗೆ ನೆಟ್ಟಿದೆ. ವಿಎಚ್‌ಪಿ ಜೊತೆಗೆ ಕೈಜೋಡಿಸಿರುವ ಕೆಲವು ಅಖಾಡಗಳು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿವೆ. 

ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ. ವಿವಾದಿತ ನಿವೇಶನದ ಸಮೀಪ ಬುಧವಾರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಹಿಂದೂ ಸಮಾಜ ಪಾರ್ಟಿಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ಹೋಟೆಲ್‌ಗಳು ಹಾಗೂ ಧರ್ಮಶಾಲಾಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪಟ್ಟಣಕ್ಕೆ ಬರುವ ಎಲ್ಲ ವಾಹನ
ಗಳ ತಪಾಸಣೆ ಸಹ ನಡೆಸಲಾಗುತ್ತಿದೆ. ಪಟ್ಟಣದ ಎಲ್ಲ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಕ್ಷಿಪ್ರ ಕಾರ್ಯಪಡೆಯ ಯೋಧರು ಸೇರಿ ವಿವಿಧ ಪಡೆ ನಿಯೋಜಿಸಲಾಗಿದೆ. 2,500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.