ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ “ತಾರಿಖ್ ರೆಹಮಾನ್‌”ಗೆ ಜೀವಾವಧಿ ಶಿಕ್ಷೆ

0
579

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಗುರಿಯಾಗಿಸಿಕೊಂಡು 2004ರಲ್ಲಿ ಚುನಾವಣಾ ರ‍್ಯಾಲಿ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದಲ್ಲಿ, ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್‌ಗೆ (50) ಜೀವಾವಧಿ ಹಾಗೂ ಉಳಿದ 19 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ವಿಧಿಸಿದೆ.

ಢಾಕಾ (ಪಿಟಿಐ): ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಗುರಿಯಾಗಿಸಿಕೊಂಡು 2004ರಲ್ಲಿ ಚುನಾವಣಾ ರ‍್ಯಾಲಿ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದಲ್ಲಿ, ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್‌ಗೆ (50) ಜೀವಾವಧಿ ಹಾಗೂ ಉಳಿದ 19 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ವಿಧಿಸಿದೆ.

ದಾಳಿಯಲ್ಲಿ 24 ಜನ ಮೃತಪಟ್ಟಿದ್ದರು. ಶೇಖ್ ಹಸೀನಾ ಸೇರಿ 500 ಮಂದಿ ಗಾಯಗೊಂಡಿದ್ದರು. ಹಸೀನಾ, ಶ್ರವಣಶಕ್ತಿ ಕಳೆದುಕೊಂಡಿದ್ದರು.

ದೇಶದಿಂದ ಪಲಾಯನ ಮಾಡಿರುವ ಅಪರಾಧಿಗಳನ್ನು ವಾಪಸ್‌ ಕರೆತಂದು ಶಿಕ್ಷೆಗೆ ಗುರಿಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

                  – ಅಸಾದ್‌ಜುಮಾನ್ ಖಾನ್ ಕಮಾಲ್ ಗೃಹ ಸಚಿವ