ಬಹರೇನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ : ಭಾರತದ ಪ್ರಿಯಾಂಶು ಚಾಂಪಿಯನ್‌

0
6

ಅಗ್ರ ಶ್ರೇಯಾಂಕದ ಕೆನಡದ ಆಟಗಾರ ಜೇಸನ್‌ ಆಂಥೋನಿ ಹೊ–ಶುಯೆ ಅವರನ್ನು ಸೋಲಿಸಿದ ಭಾರತದ ಪ್ರಿಯಾಂಶು ರಾಜಾವತ್‌, ಬಹರೇನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಟೂರ್ನಿಯ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಇಸಾ ಟೌನ್‌, ಬಹರೇನ್‌ (ಪಿಟಿಐ): ಅಗ್ರ ಶ್ರೇಯಾಂಕದ ಕೆನಡದ ಆಟಗಾರ ಜೇಸನ್‌ ಆಂಥೋನಿ ಹೊ–ಶುಯೆ ಅವರನ್ನು ಸೋಲಿಸಿದ ಭಾರತದ ಪ್ರಿಯಾಂಶು ರಾಜಾವತ್‌, ಬಹರೇನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಟೂರ್ನಿಯ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಅಕ್ಟೋಬರ್ 13 ರ ಭಾನುವಾರ ನಡೆದ ಫೈನಲ್‌ನಲ್ಲಿ 17 ವರ್ಷ ವಯಸ್ಸಿನ ಪ್ರಿಯಾಂಶು 16–21, 21–7, 21–12ರಲ್ಲಿ ಆಂಥೋನಿ ಹೊ–ಶುಯೆ ಅವರನ್ನು ಸೋಲಿಸಿದರು.

ಪ್ರೀಕ್ವಾರ್ಟರ್‌ನಲ್ಲಿ ಭಾರತ ಆಟಗಾರ, ಎರಡನೇ ಶ್ರೇಯಾಂಕದ ಅಡೆ ರೆಸ್ಕಿ ದ್ವೈಕಾಯೊ ಅವರನ್ನು ಸೋಲಿಸಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಆಟಗಾರರಾದ ಜೂಹಿ ದೇವಾಂಗನ್ ಮತ್ತು ವೆಂಕಟ್‌ ಗೌರವ್‌ ಪ್ರಸಾದ್‌ 21–18, 21–16 ರಿಂದ ಥಾಯ್ಲೆಂಡ್‌ನ ಪನ್ನಾವತ್‌ ತೀರಪಣಿತುನ್‌ – ಕನ್ಯಾನತ್‌ ಸುಡಚೊಚಂ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದರು. ಭಾರತದ ಜೋಡಿ ಅಗ್ರ ಶ್ರೇಯಾಂಕ ಪಡೆದಿತ್ತು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಇರಾ ಶರ್ಮಾ ಎರಡನೇ ಸ್ಥಾನ ಪಡೆದರು. ಇಂಡೊನೇಷ್ಯಾದ ಶ್ರೀಫಾತ್ಮಾವತಿ ಫೈನಲ್‌ನಲ್ಲಿ 21–14, 24–22 ರಲ್ಲಿ ಇರಾ ಮೇಲೆ ಜಯಗಳಿಸಿದ್ದರು.