ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

0
383

ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್‌ಡಿಪಿ) ಶೇ 9.6ರಷ್ಟಾಗಲಿದೆ.

ಹಿಂದಿನ ವರ್ಷದ ಶೇ 10.4ಕ್ಕೆ ಹೋಲಿಸಿದರೆ ವೃದ್ಧಿ ದರವು ಶೇ 0.8ರಷ್ಟು ಕಡಿಮೆಯಾಗಲಿದೆ.

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್‌ಡಿಪಿ) ಶೇ 9.6ರಷ್ಟಾಗಲಿದೆ.

ಹಿಂದಿನ ವರ್ಷದ ಶೇ 10.4ಕ್ಕೆ ಹೋಲಿಸಿದರೆ ವೃದ್ಧಿ ದರವು ಶೇ 0.8ರಷ್ಟು ಕಡಿಮೆಯಾಗಲಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿ ಉದ್ಭವಿಸಿದ್ದರಿಂದ ಆರ್ಥಿಕ ವೃದ್ಧಿ ದರ ಹಿನ್ನಡೆ ಕಂಡಿದೆ. ಮಳೆ ಅಭಾವದಿಂದ ಕೃಷಿ ವಲಯದ ಪ್ರಗತಿಯು ಶೇ 4.8ರಷ್ಟು ಕುಸಿಯಲಿದೆ ಎಂದು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಕೃಷಿ ವಲಯದಲ್ಲಿನ ಹಿನ್ನಡೆ ಹೊರತುಪಡಿಸಿದರೆ ಕೈಗಾರಿಕೆ, ನಿರ್ಮಾಣ, ವಿದ್ಯುತ್‌ ಮತ್ತಿತರ ಕ್ಷೇತ್ರಗಳಲ್ಲಿ ಪ್ರಗತಿ ಕಂಡು ಬರಲಿದೆ. ಸೇವಾ ವಲಯವು ಶೇ 12.3ರಷ್ಟು ಬೆಳವಣಿಗೆ ಕಾಣಲಿದೆ. ಶೇ 9.6ರಷ್ಟು ಇರಲಿರುವ ಆರ್ಥಿಕ ವೃದ್ಧಿ ದರದಲ್ಲಿ ವ್ಯಾಪಾರ, ವೃತ್ತಿಪರ ಸೇವೆ, ವಸತಿ ಯೋಜನೆಗಳ ಕೊಡುಗೆ ಶೇ 12.9ರಷ್ಟಿದೆ. 2011–12ರ ಸ್ಥಿರ ಬೆಲೆಗಳಲ್ಲಿ ‘ಜಿಜಿಡಿಪಿ’ಯು 10.82 ಲಕ್ಷ ಕೋಟಿಗಳಷ್ಟಾಗಲಿದೆ. ಪ್ರಸಕ್ತ  ವರ್ಷದಲ್ಲಿ ಕೃಷಿ ಮತ್ತು ಕೈಗಾರಿಕಾ ವಲಯಗಳ ಕೊಡುಗೆಯು ಕ್ರಮವಾಗಿ ಶೇ 10.11 ಮತ್ತು ಶೇ 22.01ಕ್ಕೆ ಇಳಿಯಲಿದೆ.ಸೇವಾ ವಲಯದ ಕೊಡುಗೆಯು ಶೇ 67.87ಕ್ಕೆ ಹೆಚ್ಚಳಗೊಳ್ಳಲಿದೆ.