ಬಡತನ ನಿರ್ಮೂಲನೆಗೆ ಭಾರತದ ಪ್ರಯತ್ನ ಶ್ಲಾಘನೀಯ: ಡೊನಾಲ್ಡ್ ಟ್ರಂಪ್

0
683

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 73ನೇ ಅಧಿವೇಶನದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಸೆಪ್ಟೆಂಬರ್ 25 ರ ಮಂಗಳವಾರ ಮಾತನಾಡಿದ ಸಂದರ್ಭದಲ್ಲಿ, ಭಾರತ ಸರಕಾರದ ಕ್ರಮಗಳು ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ

ನ್ಯೂಯಾರ್ಕ್‌: ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸುವ ಭಾರತದ ಪ್ರಯತ್ನ ಶ್ಲಾಘನೀಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 73ನೇ ಅಧಿವೇಶನದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಸಂದರ್ಭದಲ್ಲಿ, ಭಾರತ ಸರಕಾರದ ಕ್ರಮಗಳು ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಲಕ್ಷಾಂತರ ಮಂದಿ ಬಡತನದಲ್ಲಿದ್ದಾರೆ. ಅವರನ್ನು ಬಡತನದಿಂದ ಮುಕ್ತಗೊಳಿಸಿ, ಮಧ್ಯಮ ವರ್ಗಕ್ಕೆ ಮೇಲಕ್ಕೆತ್ತಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. 

ಇಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರು ತಮ್ಮ ದೇಶ ಎದುರಿಸಿದ ಮತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಇತರ ವಿಚಾರಗಳ ಕುರಿತು ಹೇಳಲು ಬಂದಿದ್ದಾರೆ ಎಂದು ನಾವು ಯೋಚಿಸುತ್ತಿದ್ದೇವೆ. ಆದರೆ ನಾವು ಮುಂದಿನ ಜನಾಂಗಕ್ಕೆ, ನಮ್ಮ ಮಕ್ಕಳಿಗೆ ಈ ಜಗತನ್ನು ಹೇಗೆ ಉಳಿಸಿಕೊಡಲಿದ್ದೇವೆ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಟ್ರಂಪ್ ತಮ್ಮ 35 ನಿಮಿಷಗಳ ಭಾಷಣದಲ್ಲಿ ಹೇಳಿದ್ದಾರೆ.