“ಬಂಧನ್‌ ಬ್ಯಾಂಕ್‌”ಗೆ ಆರ್‌ಬಿಐ ನಿರ್ಬಂಧ

0
628

ಶಾಖೆಗಳನ್ನು ವಿಸ್ತರಿಸದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಬಂಧನ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದೆ.

ಮುಂಬೈ (ಪಿಟಿಐ): ಶಾಖೆಗಳನ್ನು ವಿಸ್ತರಿಸದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಬಂಧನ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದೆ. 

ತನ್ನ ಮುಂದಿನ ಆದೇಶ ದವರೆಗೂ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದ್ರಶೇಖರ್‌ ಘೋಷ್‌ ಅವರ ಭತ್ಯೆಯನ್ನು ಹೆಚ್ಚಿಸದಂತೆಯೂ ಸೂಚನೆ ನೀಡಿದೆ.

ಬಂಧನ್‌ ಬ್ಯಾಂಕ್‌, ಪರವಾನಗಿ ನಿಯಮ ಉಲ್ಲಂಘನೆ ಮಾಡಿದೆ. ಠೇವಣಿಗಳನ್ನು ಸಂಗ್ರಹಿಸದೇ ಇರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಪಾಲು ಬಂಡವಾಳವನ್ನು ಶೇ 40ಕ್ಕೆ ತಗ್ಗಿಸಲು ವಿಫಲವಾಗಿದೆ. ಹೀಗಾಗಿ ಈ ದಂಡನಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್‌, ಪಾಲು ಬಂಡವಾಳ ತಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಆರ್‌ಬಿಐ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರಲಾಗುವುದು ಎಂದು ತಿಳಿಸಿದೆ. 

2014ರಲ್ಲಿ ಬ್ಯಾಂಕಿಂಗ್‌ ಸೇವೆ ಆರಂಭಿಸಲು ಪರವಾನಗಿ ಪಡೆದಿತ್ತು. 2015ರಿಂದ ಕಾರ್ಯನಿರ್ವಹಣೆ ಆರಂಭಿಸಿದೆ.