ಬಂಧನದ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಪೆರು ಮಾಜಿ ರಾಷ್ಟ್ರಪತಿ “ಎಲನ್ ಗಾರ್ಸಿಯಾ”

0
372

ಎರಡು ಅವಧಿಗೆ ಪೆರು ದೇಶದ ರಾಷ್ಟ್ರಪತಿಯಾಗಿದ್ದ ಎಲನ್ ಗಾರ್ಸಿಯಾ ಬಂಧನದ ಭೀತಿಯಿಂದ ಗುಂಡು ಹೊಡೆದುಕೊಂಡು ಏಪ್ರೀಲ್ 17 ರ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ , ಅದಾಗಲೇ ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಲಿಮಾ: ಎರಡು ಅವಧಿಗೆ ಪೆರು ದೇಶದ ರಾಷ್ಟ್ರಪತಿಯಾಗಿದ್ದ “ಎಲನ್ ಗಾರ್ಸಿಯಾ” ಬಂಧನದ ಭೀತಿಯಿಂದ ಗುಂಡು ಹೊಡೆದುಕೊಂಡು ಏಪ್ರೀಲ್ 17 ರ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ , ಅದಾಗಲೇ ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 

ಅವರ ಅಧಿಕಾರಾವಧಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರನ್ನು ಬಂಧಿಸಲು ಮನೆಗೆ ಬರುತ್ತಿದ್ದಂತೆ ಅವರು ಈ ಕೃತ್ಯವನ್ನೆಸಗಿದ್ದಾರೆ. ಹಾಲಿ ರಾಷ್ಟ್ರಪತಿ ಮಾರ್ಟಿನ್ ವಿಜಯಕಾರಾ ಅವರು ಅವರ ಆತ್ಮಹತ್ಯೆ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. 

ಬ್ರೆಜಿಲ್‌ನ ಖ್ಯಾತ ನಿರ್ಮಾಣ ಸಂಸ್ಥೆಯೊಂದರಿಂದ ಭಾರಿ ಪ್ರಮಾಣದ ಲಂಚ ಸ್ವೀಕರಿಸಿದ ಆರೋಪ ಅವರ ಮೇಲಿತ್ತು. 

1985ರಿಂದ 1990 ಮತ್ತು 2006ರಿಂದ 2011ರ ಅವಧಿಯಲ್ಲಿ ಅವರು ಪೆರುವಿನ ರಾಷ್ಟ್ರಪತಿಯಾಗಿದ್ದರು. 

ಬಂಧಿಸಲೆಂದು ಪೊಲೀಸರು ಅವರ ಮನೆಗೆ ಹೋದಾಗ ಫೋನ್ ಕಾಲ್ ಮಾಡವ ನೆಪದಲ್ಲಿ ಕೋಣೆಯೊಳಕ್ಕೆ ಹೋದರು. ಬಳಿಕ ಬಾಗಿಲು ಮುಚ್ಚಿಕೊಂಡರು. ಕೆಲ ಹೊತ್ತಿನ ಬಳಿಕ ಅವರ ಕೋಣೆಯಿಂದ ಗುಂಡು ಹಾರಿದ ಶಬ್ಧ ಕೇಳಿ ಬಂತು. ತಕ್ಷಣ ಪೊಲೀಸರು ಕದ ಮುರಿದು ಒಳ ಹೋದಾಗ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿದ್ದ ಗಾರ್ಸಿಯಾ ತಲೆಗೆ ಗುಂಡು ಹೊಕ್ಕಿತ್ತು. 

ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. 

ಗಾರ್ಸಿಯಾ ಸದಾ ತಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದರು.