ಬಂಗಾಳದಲ್ಲಿ ರಸಗುಲ್ಲಾ ದಿನಾಚರಣೆ

0
12

2017 ರ ನವೆಂಬರ್ 14 ರಂದು ಸಿಹಿಖಾದ್ಯ “ರಸಗುಲ್ಲಾ”ಗೆ ಭೌಗೋಳಿಕ ಸೂಚಿ (ಜಿಐ) ದೊರೆತ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ “ರಸಗುಲ್ಲಾ” ದಿನವನ್ನು ನವೆಂಬರ್ 14 ರ ಗುರುವಾರ ಆಚರಿಸಲಾಯಿತು.

ಕೋಲ್ಕತ್ತ: 2017 ರ ನವೆಂಬರ್ 14 ರಂದು ಸಿಹಿಖಾದ್ಯ “ರಸಗುಲ್ಲಾ”ಗೆ ಭೌಗೋಳಿಕ ಸೂಚಿ (ಜಿಐ) ದೊರೆತ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ “ರಸಗುಲ್ಲಾ” ದಿನವನ್ನು ನವೆಂಬರ್ 14 ರ ಗುರುವಾರ ಆಚರಿಸಲಾಯಿತು.

ಉತ್ತರ ಕೋಲ್ಕತ್ತಾದ ಬಾಗ್ ಬಜಾರ್ ನ ಬಾಣಸಿಗ ನವೀನ್ ಚಂದ್ರ ದಾಸ್ ಎಂಬುವರು ಬಂಗಾಳಿ ರಸಗುಲ್ಲಾವನ್ನು ಮೊದಲು ತಯಾರಿಸದರು. ಇವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದ್ದು ನವೆಂಬರ್ 14 ರ ಗುರುವಾರ ರಾಜ್ಯ ಸರ್ಕಾರದ ಸಚಿವೆ ಶಶಿ ಪಂಜಾ ಮಾಲಾರ್ಪಣೆ ಮಾಡಿದರು ಎಂದು ನವೀನ್ ಚಂದ್ರ ದಾಸ್ ಅವರ ವಂಶಜ ಧಿಮನ್ ದಾಸ್ ತಿಳಿಸಿದರು.

ಮಕ್ಕಳಿಗೆ ರಸಗುಲ್ಲಾ ಹಂಚಿ  ಧಿಮನ್ ದಾಸ್ ಕುಟುಂಬ ಸಂಭ್ರಮ ಪಟ್ಟಿತು. ರಾಜ್ಯದ ಎಲ್ಲ ಸಿಹಿ ಖಾದ್ಯಗಳ ಅಂಗಡಿಗಳು ಈ ದಿನವನ್ನು ರಸಗುಲ್ಲಾ ದಿನವನ್ನಾಗಿ ಆಚರಿಸುತ್ತವೆ.

ರಸಗುಲ್ಲಾಗೆ ಭೌಗೋಳಿಕ ಸೂಚಿ ಪಡೆಯಲು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನಡುವೆ ಪೈಪೋಟಿ ನಡೆದಿತ್ತು. ರಸಗುಲ್ಲಾ ತನ್ನ ರಾಜ್ಯದ್ದೆಂದು ಎರಡು ರಾಜ್ಯಗಳು ವಾದಿಸಿದ್ದವು. ಇದೀಗ ಒಡಿಶಾ ಕೂಡಾ “ಒಡಿಶಾ ರಸಗುಲ್ಲಾ” ಹೆಸರಿನಲ್ಲಿ ಭೌಗೋಳಿಕ ಸೂಚಿ (ಜಿಐ) ಪಡೆದಿದೆ. ಬಂಗಾಳದ ರಸಗುಲ್ಲಾ ವನ್ನು “ಬಂಗಾಲರ್ ರಸಗುಲ್ಲಾ” ಎಂದು ಕರೆಯಲಾಗಿದೆ.