ಫ್ಲ್ಯಾಟ್‌ ನಿರ್ಮಾಣ ವಿಳಂಬ ಹಣ ಪಾವತಿಗೆ ಅವಕಾಶ : ಎನ್‌ಸಿಡಿಆರ್‌ಸಿ ಆದೇಶ

0
23

ಫ್ಲ್ಯಾಟ್‌ ಹಸ್ತಾಂತರವು ನಿಗದಿತ ಅವಧಿ ಮೀರಿ ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾದರೆ ಮನೆ ಖರೀದಿದಾರರು ತಾವು ಪಾವತಿಸಿದ್ದ ಮೊತ್ತವನ್ನೆಲ್ಲ ಮರು ಪಾವತಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.

ನವದೆಹಲಿ: ಫ್ಲ್ಯಾಟ್‌ ಹಸ್ತಾಂತರವು ನಿಗದಿತ ಅವಧಿ ಮೀರಿ ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾದರೆ ಮನೆ ಖರೀದಿದಾರರು ತಾವು ಪಾವತಿಸಿದ್ದ ಮೊತ್ತವನ್ನೆಲ್ಲ ಮರು ಪಾವತಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.

ಕಟ್ಟಡ ನಿರ್ಮಾಣಗಾರರು ಮೊದಲೇ ಭರವಸೆ ನೀಡಿದ ದಿನಕ್ಕಿಂತ ಒಂದು ವರ್ಷಕ್ಕೂ ಹೆಚ್ಚು ಸಮಯ ವಿಳಂಬ ಮಾಡಿದ ಪ್ರಕರಣಗಳಲ್ಲಿ ಖರೀದಿದಾರರು ಶೇ 10ರ ಬಡ್ಡಿ ದರದಲ್ಲಿ ತಾವು ಪಾವತಿಸಿದ್ದ ಹಣ ಮರಳಿಸಲು ಕೋರಿಕೆ ಸಲ್ಲಿಸಬಹುದಾಗಿದೆ ಎಂದು ಗ್ರಾಹಕರ ವ್ಯಾಜ್ಯ ಪರಿಹಾರ ರಾಷ್ಟ್ರೀಯ ಆಯೋಗವು (ಎನ್‌ಸಿಡಿಆರ್‌ಸಿ) ಆದೇಶಿಸಿದೆ.

ಮನೆ ಖರೀದಿದಾರರಿಗೆ ಫ್ಲ್ಯಾಟ್‌ ಒದಗಿಸಲು ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಅನೇಕ ಕಾರಣಗಳಿಗೆ ತೀವ್ರ ವಿಳಂಬ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಆಯೋಗವು ಈ ಮಹತ್ವದ ಆದೇಶ ನೀಡಿದೆ.

ಖರೀದಿದಾರರಿಗೆ ಫ್ಲ್ಯಾಟ್‌ನ ಮಾಲೀಕತ್ವವನ್ನು ಒಪ್ಪಿಸಲು ಅನಗತ್ಯ ವಿಳಂಬ ಮಾಡಬಾರದು ಎಂದು ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಗ್ರಾಹಕರ ವೇದಿಕೆಗಳು ಅಭಿಪ್ರಾಯಪಟ್ಟಿದ್ದವು.  ಆದರೆ, ಹಣ ಮರುಪಾವತಿ ಕುರಿತು ಯಾವುದೇ ಕಾಲ ಮಿತಿ ವಿಧಿಸಿರಲಿಲ್ಲ.

ಫ್ಲ್ಯಾಟ್‌ ಹಸ್ತಾಂತರವು ವಿಳಂಬವಾದರೆ ಅದರಲ್ಲೂ ನಿರ್ದಿಷ್ಟವಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ತಡವಾದರೆ ಖರೀದಿದಾರರು ತಾವು ಪಾವತಿಸಿದ ಹಣವನ್ನು ಕಟ್ಟಡ ನಿರ್ಮಾಣಗಾರರಿಂದ ಮರುಪಾವತಿಗೆ ಕೇಳುವ ಹಕ್ಕು ಹೊಂದಿದ್ದಾರೆ ಎಂದು ಪ್ರೇಮ್‌ ನರೇನ್‌ ಅವರಿದ್ದ ಪೀಠ ಆದೇಶಿಸಿದೆ.

ದೆಹಲಿ ನಿವಾಸಿ ಶಲಭ್‌ ನಿಗಮ್‌ ಅವರು ಗುರುಗ್ರಾಂನ ವಿಲಾಸಿ ಗೃಹ ನಿರ್ಮಾಣ ಯೋಜನೆ ಗ್ರೀನೊಪೊಲಿಸ್‌ನಲ್ಲಿ 1 ಕೋಟಿಗೆ ಫ್ಲ್ಯಾಟ್‌ ಖರೀದಿಸಲು 2012ರಲ್ಲಿ ಮುಂದಾಗಿದ್ದರು.ಈ ಸಂಬಂಧ  90 ಲಕ್ಷ ಪಾವತಿಸಿದ್ದರು. 42 ತಿಂಗಳಲ್ಲಿ ಫ್ಲ್ಯಾಟ್‌ ಹಸ್ತಾಂತರಿಸುವುದಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಭರವಸೆ ನೀಡಿತ್ತು. ಈ ವಾಗ್ದಾನ ಈಡೇರದ ಕಾರಣಕ್ಕೆ ನಿಗಮ್‌ ಅವರು ಗ್ರಾಹಕರ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು.