ಫ್ಲಾರಿಡಾದತ್ತ ಇರ್ಮಾ ಚಂಡಮಾರುತ

0
40

ಹಾರ್ವೆ ಚಂಡಮಾರುತದ ಅಬ್ಬರದಿಂದ ಅಮೆರಿಕ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಚಂಡಮಾರುತ ಇರ್ಮಾ ಅಪ್ಪಳಿಸಿದ್ದು, ಇದರಿಂದ ಫ್ಲಾರಿಡಾ ನಲುಗಿಹೋಗಿದೆ. ಪ್ರಬಲವಾಗಿ ಬೀಸುತ್ತಿರುವ ತಾಸಿಗೆ 249 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ.

ಅಮೆರಿಕದ ಇತಿಹಾಸದಲ್ಲೇ ಇರ್ಮಾ ಚಂಡಮಾರುತ ಅತಿ ಹೆಚ್ಚು ಹಾನಿಯೆಸಗಿದ ಚಂಡಮಾರುತ. ಅಂದಾಜು 200 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎನ್ನಲಾಗಿದ್ದು, ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಹಾರ್ವೆ ಚಂಡಮಾರುತದ ಅಬ್ಬರದಿಂದ ಅಮೆರಿಕ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಚಂಡಮಾರುತ ಇರ್ಮಾ ಅಪ್ಪಳಿಸಿದ್ದು, ಇದರಿಂದ ಫ್ಲಾರಿಡಾ ನಲುಗಿಹೋಗಿದೆ. ಪ್ರಬಲವಾಗಿ ಬೀಸುತ್ತಿರುವ ತಾಸಿಗೆ 249 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಜತೆಗೆ ಕನಿಷ್ಠ 21 ಮಂದಿಯನ್ನು ಬಲಿ ಪಡೆದುಕೊಂಡಿದೆ. ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸ್ಥಳೀಯಾಡಳಿತ ಮತ್ತು ಗವರ್ನರ್ ಜನರಿಗೆ ಸೂಚಿಸಿದ್ದಾರೆ.

6.50 ಲಕ್ಷ ಮಂದಿ ಸ್ಥಳಾಂತರ: ಸುಮಾರು 6. 50 ಲಕ್ಷ ಮಂದಿ ಮನೆ ತೊರೆದು ಬೇರಡೆ ಹೋಗಿದ್ದಾರೆ. ಹೋಟೆಲ್​ಗಳಲ್ಲಿ ನಿರ್ವಸಿತಗರ ದಂಡೇ ತುಂಬಿಹೋಗಿವೆ. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಮುಂದಿನ ವಾರ ಜೋಸ್, ಕಟಿಯಾ ಚಂಡಮಾರುತಗಳು ಅಪ್ಪಳಿಸುವ ಸೂಚನೆ ದೊರೆತಿದೆ.

ಸಾಕುಪ್ರಾಣಿಗಳಿಗೂ ರಕ್ಷಣೆ: ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಯ ಜತೆಗೆ ಸಾಕುಪ್ರಾಣಿಗಳನ್ನೂ ರಕ್ಷಿಸಲಾಗುತ್ತಿದೆ. ಸ್ಯಾನ್ ಡಿಯಾಗೊ ಮೂಲದ ಸೌತ್​ವೆಸ್ಟ್ ಏರ್​ಲೈನ್ಸ್ ಸುಮಾರು 60ಕ್ಕೂ ಹೆಚ್ಚು ನಾಯಿ, ಬೆಕ್ಕುಗಳನ್ನು ಅನಾಥಾಶ್ರಮಕ್ಕೆ ಸಾಗಿಸಿದೆ.-ಏಜೆನ್ಸೀಸ್

ಭಾರತೀಯರ ರಕ್ಷಣೆಗೆ ಕ್ರಮ

ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಭಾರತೀಯರು ನೆಲೆಸಿದ್ದು, ಚಂಡಮಾರುತಕ್ಕೆ ಸಿಲುಕಿ ತೊಂದರೆಗೊಳಗಾಗಿ ದ್ದರೆ, ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಭೂಕಂಪಕ್ಕೆ 61 ಮಂದಿ ಬಲಿ

ಮೆಕ್ಸಿಕೊ ಸಿಟಿ: ದೇಶದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಭೂಕಂಪಕ್ಕೆ ತುತ್ತಾಗಿರುವ ಮೆಕ್ಸಿಕೊದ ದಕ್ಷಿಣ ಪ್ರಾಂತ್ಯದಲ್ಲಿ ಸತ್ತವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ನೈಸರ್ಗಿಕ ವಿಕೋಪ ರಕ್ಷಣಾ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು ಸಾವಿನ ಸಂಖ್ಯೆ ಏರಿಕೆಯಾಗಲಿದೆ ಎಂದಿದೆ. ಪೆಸಿಫಿಕ್ ಸಾಗರದಲ್ಲಿ 8.2 ತೀವ್ರತೆಯ ಭೂಕಂಪನದ ಕೇಂದ್ರಬಿಂದು ದಾಖಲಾಗಿತ್ತು. ರಾಷ್ಟ್ರಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಒಕ್ಸಾಕೊ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 45 ಜನರು ಭೂಕಂಪನಕ್ಕೆ ಬಲಿಯಾಗಿದ್ದಾರೆ. ಚಿಯಾಪಾಸ್ ನಗರದಲ್ಲಿ 12 ಹಾಗೂ ತಬಾಸ್ಕೊದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಜುಶಿತಾನ್ ನಗರದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದ್ದು ಅರ್ಧದಷ್ಟು ನಗರವೇ ಮಣ್ಣುಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.