ಫ್ರೆಂಚ್ ಓಪನ್ ಬಹುಮಾನ ಮೊತ್ತ ಏರಿಕೆ

0
545

ಮುಂದಿನ ಫ್ರೆಂಚ್ ಓಪನ್ ಕ್ಲೇಕೋರ್ಟ್ ಟೆನಿಸ್ ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು ಶೇ. 8 ಏರಿಕೆ ಮಾಡಲಾಗಿದೆ. ಒಟ್ಟು ಬಹುಮಾನ ಮೊತ್ತ 332 ಕೋಟಿ ರೂ.ಗೆ (42.6 ದಶಲಕ್ಷ ಯುರೋ) ಏರಿಕೆಯಾಗಿದ್ದು, ಸಿಂಗಲ್ಸ್ ವಿಭಾಗದ ವಿಜೇತರು 17.94 ಕೋಟಿ ರೂ. (2.3 ದಶಲಕ್ಷ ಯುರೋ) ಬಹುಮಾನ ಪಡೆಯಲಿದ್ದಾರೆ.

ಪ್ಯಾರಿಸ್: ಮುಂದಿನ ಫ್ರೆಂಚ್ ಓಪನ್ ಕ್ಲೇಕೋರ್ಟ್ ಟೆನಿಸ್ ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು ಶೇ. 8 ಏರಿಕೆ ಮಾಡಲಾಗಿದೆ. ಒಟ್ಟು ಬಹುಮಾನ ಮೊತ್ತ 332 ಕೋಟಿ ರೂ.ಗೆ (42.6 ದಶಲಕ್ಷ ಯುರೋ) ಏರಿಕೆಯಾಗಿದ್ದು, ಸಿಂಗಲ್ಸ್ ವಿಭಾಗದ ವಿಜೇತರು 17.94 ಕೋಟಿ ರೂ. (2.3 ದಶಲಕ್ಷ ಯುರೋ) ಬಹುಮಾನ ಪಡೆಯಲಿದ್ದಾರೆ.

ಕಳೆದ ವರ್ಷದ ಒಟ್ಟು ಬಹುಮಾನ ಮೊತ್ತ 305 ಕೋಟಿ ರೂ. (39.2 ದಶಲಕ್ಷ ಯುರೋ) ಆಗಿತ್ತು. ಮೇ 26 ರಂದು ಟೂರ್ನಿ ಆರಂಭಗೊಳ್ಳಲಿದೆ. ಫ್ರೆಂಚ್ ಓಪನ್​ಗೆ 5 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಸಿಮೋನ್ ಮ್ಯಾಥ್ಯೂ ಕೋರ್ಟ್ ಅನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ.

ಈ ಕೋರ್ಟ್​ನಲ್ಲಿ ಮೊದಲು ಆಡುವ ಅವಕಾಶ ಯಾರಿಗೆ ಸಿಗಲಿದೆ ಎಂಬುದು ಕುತೂಹಲಕಾರಿ ಎನಿಸಿದೆ. ಕೂಟದ ಸೆಂಟರ್ ಕೋರ್ಟ್​ಗೆ ಮೇಲ್ಪಾವಣಿ ಅಳವಡಿಸುವ ಕಾರ್ಯ ಇನ್ನೂ ಪ್ರಗತಿಯಾಲ್ಲಿದ್ದು, 2020ರ ಆವೃತ್ತಿಗೆ ಸಂಪೂರ್ಣ ಸಿದ್ಧಗೊಳ್ಳುವ ನಿರೀಕ್ಷೆ ಇದೆ.