ಫ್ರಾನ್ಸ್‌ನ ಬೇಯಾಕ್ಸ್‌–ಕಲ್ವಾಡೋಸ್‌ ಪ್ರಶಸ್ತಿ : ಮರಣೋತ್ತರವಾಗಿ ಪತ್ರಕರ್ತೆ ಗೌರಿ ಲಂಕೇಶ್‌ಗೆ ಪ್ರಶಸ್ತಿ ಪ್ರದಾನ

0
349

ಫ್ರಾನ್ಸ್‌ನ ಬೇಯಾಕ್ಸ್‌–ಕಲ್ವಾಡೋಸ್‌ ಪ್ರಶಸ್ತಿಯನ್ನು ಮರಣೋತ್ತರವಾಗಿ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ನೀಡಲಾಯಿತು.

ಬೆಂಗಳೂರು: ಫ್ರಾನ್ಸ್‌ನ ಬೇಯಾಕ್ಸ್‌–ಕಲ್ವಾಡೋಸ್‌ ಪ್ರಶಸ್ತಿಯನ್ನು ಮರಣೋತ್ತರವಾಗಿ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ನೀಡಲಾಯಿತು.

ಹುತಾತ್ಮ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಅವರ ಹೆಸರನ್ನೂ ಅನಾವರಣ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿತಾ ಲಂಕೇಶ್‌, ‘ಗೌರಿ ಅವರು ಸರ್ಕಾರ ಹಾಗೂ ವ್ಯವಸ್ಥೆಯ ನೈಜ ಮುಖವನ್ನು ಅನಾವರಣ ಮಾಡುತ್ತಿದ್ದರು. ಹಿಂದುತ್ವದ ಕಟು ಸತ್ಯಗಳನ್ನು ತಮ್ಮ ಬರಹಗಳ ಮೂಲಕ ಹೇಳುತ್ತಿದ್ದರು’ ಎಂದು ಹೇಳಿದರು.

 ‘ಗೌರಿ ಸಾವಿನ ಬಳಿಕ ದೇಶದಾದ್ಯಂತ ‘ನಾನು ಗೌರಿ’, ‘ನಾವೂ ಗೌರಿ’ ಎಂಬ ಆಂದೋಲನಗಳು ನಡೆದವು. ಇದಕ್ಕೆ ಲಕ್ಷಾಂತರ ಜನರು ಪ್ರತಿಕ್ರಿಯಿಸಿದರು. ಬಹುಭಾಷಾ ನಟ ಪ್ರಕಾಶ್‌ ರೈ ಕೂಡ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಬೆಂಬಲಿಸಿದರು’ ಎಂದು ಕವಿತಾ ನೆನಪಿಸಿಕೊಂಡರು.

ಈ ಪ್ರಶಸ್ತಿಯನ್ನು ಯುದ್ಧ ವರದಿಗಳನ್ನು ಮಾಡಿದ ಇಲ್ಲವೇ ಕರ್ತವ್ಯನಿರತರಾಗಿದ್ದಾಗ ಹತ್ಯೆಗೊಳಗಾದ 
ವರದಿಗಾರರಿಗೆ ನೀಡಲಾಗುತ್ತದೆ.