ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಟಿ “ಅನುಷ್ಕಾ ಶರ್ಮಾ”

0
16

ನಿಯತಕಾಲಿಕೆ ಫಾರ್ಚೂನ್‌ ಇಂಡಿಯಾ ತಯಾರಿಸಿರುವ “2019ನೇ ಸಾಲಿನ ಭಾರತದ 50 ಅತಿ ಪ್ರಭಾವಿ ಮಹಿಳೆಯರ ಪಟ್ಟಿ’ಯಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (39 ನೇ) ಸ್ಥಾನ ಪಡೆದಿದ್ದಾರೆ.

ನವದೆಹಲಿ: ನಿಯತಕಾಲಿಕೆ ಫಾರ್ಚೂನ್‌ ಇಂಡಿಯಾ ತಯಾರಿಸಿರುವ “2019ನೇ ಸಾಲಿನ ಭಾರತದ 50 ಅತಿ ಪ್ರಭಾವಿ ಮಹಿಳೆಯರ ಪಟ್ಟಿ’ಯಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (39 ನೇ) ಸ್ಥಾನ ಪಡೆದಿದ್ದಾರೆ.

ತಮ್ಮ 25ನೇ ವಯಸ್ಸಿನಲ್ಲೇ ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದ ಅನುಷ್ಕಾ, ಈವರೆಗೆ ಅದರಿಂದ ಮೂರು ಪುಟ್ಟ ಬಜೆಟ್‌ನ ಚಿತ್ರಗಳನ್ನು ತಯಾರಿಸಿದ್ದಾರೆ. ನೆಟ್‌ಫ್ಲಿಕ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡು ಟೆಲಿ ಚಲನಚಿತ್ರ, ವೆಬ್‌ಸರಣಿಗಳನ್ನು ನಿರ್ಮಿಸಿದ್ದಾರೆ. “ನಶ್‌’ ಎಂಬ ತಮ್ಮದೇ ಆದ ಸಿದ್ಧ ಉಡುಪು ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಮೈಂತ್ರಾ, ಲ್ಯಾವಿ, ನಿವಿಯಾ ಹಾಗೂ ಎಲ್‌ 18ನಂಥ ಪ್ರತಿಷ್ಠಿತ ಕಂಪನಿಗಳ ಪ್ರಚಾರ ರಾಯಭಾರಿಯೂ ಆಗಿದ್ದಾರೆ.

ಹೀಗೆ, ವಾಣಿಜ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವುದರ ಜತೆಗೆ, ಸಾಂಸ್ಕೃತಿಕ ಪ್ರತಿನಿಧಿಯಂತೆ ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಗಳಿಸಿರುವ ಕಾರಣಕ್ಕಾಗಿ ಅನುಷ್ಕಾರನ್ನು ಈ ಪಟ್ಟಿಗೆ ಆಯ್ಕೆ ಮಾಡಲಾಗಿದೆ ಎಂದು ಫಾರ್ಚೂನ್‌ ಇಂಡಿಯಾ ಹೇಳಿದೆ.

 2019ನೇ ಸಾಲಿನ ಭಾರತದ 50 ಅತಿ ಪ್ರಭಾವಿ ಮಹಿಳೆಯರ ಪಟ್ಟಿ’ಯಲ್ಲಿ 1 ನೇ ಸ್ಥಾನ  ಜಿಯಾ ಮೋಡಿ, 2 ನೇ ಸ್ಥಾನ ಕಿರಣ್ ಮಜುಂದಾರ್-ಶಾ, ನೇ ಸ್ಥಾನ ಸುನಿತಾ ರೆಡ್ಡಿ, ನೇ ಸ್ಥಾನ  ಆಲಿಸ್ ಜಿ. ವೈದ್ಯನ್, 5 ನೇ ಸ್ಥಾನ ಜರಿನ್ ದಾರುವಾಲಾ, 6 ನೇ ಸ್ಥಾನ ಮಲ್ಲಿಕಾ ಶ್ರೀನಿವಾಸನ್, 7 ನೇ ಸ್ಥಾನ ಅರುಂಧತಿ ಭಟ್ಟಾಚಾರ್ಯ 8 ನೇ ಸ್ಥಾನ ಕಾಕು ನಖಾಟೆ 9 ನೇ ಸ್ಥಾನ ಶೋಭಾನ ಭಾರ್ತಿಯಾ 10 ನೇ ಸ್ಥಾನ ರೇಣುಕಾ ರಾಮನಾಥ್ ಪಡೆದಿದ್ದಾರೆ.