ಫೋರ್ಟಿಸ್‌ ಹೆಲ್ತ್‌ಕೇರ್ ವಿರುದ್ಧ ‘ಸೆಬಿ’ ತನಿಖೆ

0
25

ನಿಯಮ ಉಲ್ಲಂಘನೆಯಾಗಿರುವ ಆರೋಪಗಳು ಕೇಳಿ ಬಂದಿರುವುದರಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಫೋರ್ಟಿಸ್‌ ಹೆಲ್ತ್‌ಕೇರ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದೆ.

ನವದೆಹಲಿ: ನಿಯಮ ಉಲ್ಲಂಘನೆಯಾಗಿರುವ ಆರೋಪಗಳು ಕೇಳಿ ಬಂದಿರುವುದರಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಫೋರ್ಟಿಸ್‌ ಹೆಲ್ತ್‌ಕೇರ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದೆ.

ಒಳಗಿನವರೇ ಕೈವಾಡ ನಡೆಸಿ ಹಣಕಾಸು ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿರುವುದರಿಂದ ಫೋರ್ಟಿಸ್‌ ಮತ್ತು ಪ್ರವರ್ತಕರ ಸಮೂಹದ ಸಂಸ್ಥೆಗಳ ವಿರುದ್ಧ ‘ಸೆಬಿ’ ತನಿಖೆ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೋರ್ಟಿಸ್‌ ಪ್ರವರ್ತಕರಾದ ಮಲ್ವಿಂದರ್‌ ಸಿಂಗ್‌ ಮತ್ತು ಶಿವೇಂದರ್‌ ಸಿಂಗ್‌ ಅವರು ಒಂದು ವರ್ಷದ ಹಿಂದೆ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೇ ಸಂಸ್ಥೆಯಿಂದ 550 ಕೋಟಿ ಹಣ ಪಡೆದಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ‘ಸೆಬಿ’ ಈ ತನಿಖೆ ಆರಂಭಿಸಿದೆ ಎನ್ನಲಾಗಿದೆ.

ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ (ಎಸ್‌ಎಫ್‌ಐಒ) ಮತ್ತು ಕಂಪನಿಗಳ ರಿಜಿಸ್ಟ್ರಾರ್‌ ಸಹ ವಂಚನೆ ನಡೆದಿರುವುದನ್ನು ಪರಿಶೀಲಿಸುತ್ತಿದೆ.

ಹಣಕಾಸು ಅಕ್ರಮ ನಡೆದಿದೆ ಎನ್ನುವುದು ಗಮನಕ್ಕೆ ಬಂದ ಬಳಿಕ ಫೆಬ್ರುವರಿಯಲ್ಲಿ ತನಿಖೆ ಆರಂಭಿಸಲಾಯಿತು. ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ಸಂಸ್ಥೆಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.