ಫೇಸ್‌ಬುಕ್‌: 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲ ತರಬೇತಿ

0
231

ವಹಿವಾಟು ವಿಸ್ತರಣೆ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು 2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲದ ತರಬೇತಿ ನೀಡಲಾಗುವುದು ಎಂದು ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ.

ನವದೆಹಲಿ (ಪಿಟಿಐ): ವಹಿವಾಟು ವಿಸ್ತರಣೆ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು 2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲದ ತರಬೇತಿ ನೀಡಲಾಗುವುದು ಎಂದು ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ.

‘ಸಣ್ಣ ವಹಿವಾಟುದಾರರು ಕೂಡ ಜಾಗತಿಕ ಆರ್ಥಿಕ ವಹಿವಾಟಿನ ಲಾಭ ಪಡೆಯಬೇಕು ಕೆಲವು ಸಹಭಾಗಿತ್ವದೊಂದಿಗೆ ಇಂತಹ ಜನರನ್ನು ಸಂಸ್ಥೆಯ ಮೂಲಕ ತಲುಪುತ್ತಿದ್ದೇವೆ. 2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲ ಕಲಿಸಿಕೊಡಲಿದ್ದೇವೆ’ ಎಂದು ಸಂಸ್ಥೆಯ ಸಾರ್ವಜನಿಕ ನೀತಿಯ ಭಾರತ, ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕಿ ಅಂಖಿದಾಸ್‌ ತಿಳಿಸಿದ್ದಾರೆ.

50 ಸಂಸ್ಥೆಯ ಸಹಭಾಗಿತ್ವದೊಂದಿಗೆ ಭಾರತದ 150 ನಗರಗಳು ಹಾಗೂ 40 ಸಾವಿರ ಗ್ರಾಮಗಳಲ್ಲಿ 10 ಲಕ್ಷ ಮಂದಿಗೆ ತರಬೇತಿ ನೀಡಲಾಗಿದೆ. ಫೇಸ್‌ಬುಕ್‌ನ ಬಳಕೆ, ಛಾಯಾಚಿತ್ರಗಳ ಶೇರಿಂಗ್‌ ಮೂಲಕ ಉದ್ಯಮ ಸೃಷ್ಟಿಗೂ ಸಹಕಾರಿಯಾಗಿರುತ್ತದೆ. ಸ್ಥಳೀಯ ವಹಿವಾಟುದಾರರನ್ನು ಇನ್ನಷ್ಟು ಬೆಳೆಸಲು ಸಹಕಾರಿಯಾಗಿರುತ್ತದೆ’ ಎಂದರು.