“ಫೇಸ್‌ಬುಕ್‌”ನಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚು

0
17

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 175 ರಾಷ್ಟ್ರಗಳು ಫೇಸ್‌ಬುಕ್‌ ಖಾತೆ ಹೊಂದಿವೆ. ಜತೆಗೆ 109 ದೇಶಗಳ ಮುಖ್ಯಸ್ಥರು ಫೇಸ್‌ಬುಕ್‌ ಪುಟಗಳನ್ನು ಹೊಂದಿದ್ದಾರೆ.

ಜಿನಿವಾ (ಪಿಟಿಐ): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು
ಜನಪ್ರಿಯರಾಗಿದ್ದಾರೆ.

ಮೋದಿ ಅವರಿಗೆ 4.32 ಕೋಟಿ ಹಾಗೂ ಟ್ರಂಪ್‌ ಅವರಿಗೆ 2.31 ಕೋಟಿ ಫಾಲೋವರ್ಸ್‌ ಇದ್ದಾರೆ ಎಂದು ಬರ್ಸನ್‌ ಕಾಹ್ನ ಮತ್ತು ವೊಲ್ಫ್‌ ಸಂಸ್ಥೆಯು ‘ಫೇಸ್‌ಬುಕ್‌ನಲ್ಲಿ ಜಗತ್ತಿನ ನಾಯಕರು’ ಕುರಿತು ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಾಂಗ ಸಚಿವರ 650 ಫೇಸ್‌ಬುಕ್‌ ಪುಟಗಳ ಸಮಗ್ರ ವಿಶ್ಲೇಷಣೆಯನ್ನು 2017ರ ಜನವರಿ1ರಿಂದ ಈ ಸಂಸ್ಥೆ ನಡೆಸಿದೆ.

ಮತದಾರರು, ಬೆಂಬಲಿಗರು ಮತ್ತು ನಾಗರಿಕರ ಜತೆ ನಾಯಕರು ಸಂಪರ್ಕದಲ್ಲಿರಲು ಫೇಸ್‌ಬುಕ್‌ ಹೆಚ್ಚು ಅನುಕೂಲ ಕಲ್ಪಿಸಿದೆ. 2018ರ ಮಾರ್ಚ್‌ 15ಕ್ಕೆ ಜಗತ್ತಿನ ಎಲ್ಲ ನಾಯಕರ ಫೇಸ್‌ಬುಕ್‌ ಪುಟಕ್ಕೆ 30.94 ಕೋಟಿ ಫಾಲೋವರ್ಸ್‌ ಇದ್ದಾರೆ.

2017ರ ಜನವರಿ1ರಿಂದ ಈ ಎಲ್ಲ ನಾಯಕರು 5.36 ಲಕ್ಷ ವಿವಿಧ ರೀತಿಯ ಮಾಹಿತಿ, ಚಿತ್ರ, ವಿಡಿಯೊಗಳನ್ನು ಪೋಸ್ಟ್‌ಮಾಡಿದ್ದಾರೆ.