ಫೇಸ್‌ಬುಕ್‌ನಲ್ಲಿ “ಕೆನರಾ ಬ್ಯಾಂಕ್‌”

0
34

ಗ್ರಾಹಕರ ಸಂಖ್ಯೆ ವಿಸ್ತರಿಸಲು ಅದರಲ್ಲೂ ವಿಶೇಷವಾಗಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಕೆನರಾ ಬ್ಯಾಂಕ್‌, ಪ್ರಭಾವಿ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಕಾರ್ಯಾರಂಭ ಮಾಡಿದೆ.

ಬೆಂಗಳೂರು: ಗ್ರಾಹಕರ ಸಂಖ್ಯೆ ವಿಸ್ತರಿಸಲು ಅದರಲ್ಲೂ ವಿಶೇಷವಾಗಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಕೆನರಾ ಬ್ಯಾಂಕ್‌, ಪ್ರಭಾವಿ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಕಾರ್ಯಾರಂಭ ಮಾಡಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿನ ಬ್ಯಾಂಕ್‌ನ ಅಧಿಕೃತ ಪುಟಗಳಿಗೆ ಕೆನರಾ ಬ್ಯಾಂಕ್‌ನ ಅಧ್ಯಕ್ಷ ಟಿ. ಎನ್‌. ಮನೋಹರನ್‌ ಮತ್ತು ಸಿಇಒ ಆರ್‌. ಎ. ಶಂಕರ ನಾರಾಯಣನ್ ಅವರು ಚಾಲನೆ ನೀಡಿದ್ದಾರೆ. ಬ್ಯಾಂಕ್‌, ಈಗಾಗಲೇ ಯೂಟ್ಯೂಬ್‌ ಮತ್ತು ಟ್ವಿಟರ್‌ನಲ್ಲಿ ಅಸ್ತಿತ್ವದಲ್ಲಿ ಇದೆ. ಗಮನಾರ್ಹ ಸಂಖ್ಯೆಯ ಚಂದಾದಾರರೂ ಇದ್ದಾರೆ. ಬ್ಯಾಂಕ್‌ಗೆ ಯೂಟ್ಯೂಬ್‌ ಚಾನೆಲ್‌ನಲ್ಲಿ 10 ಲಕ್ಷ ವೀಕ್ಷಣೆ, 25 ಸಾವಿರ ಚಂದಾದಾರರು ಮತ್ತು ಟ್ವಿಟರ್‌ನಲ್ಲಿ 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

ಗ್ರಾಹಕರು ಇನ್ನು ಮುಂದೆ ಫೇಸ್‌ಬುಕ್‌ನಲ್ಲಿ (@canarabankglobal)  ಮತ್ತು  ಇನ್‌ಸ್ಟಾಗ್ರಾಂನಲ್ಲಿ (@canarabankinsta) ಬ್ಯಾಂಕಿಂಗ್‌ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ತಾಜಾ ಮಾಹಿತಿ ಪಡೆಯಬಹುದು. ಈ ಉಪಕ್ರಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಂಕ್‌ನ ಉಪಸ್ಥಿತಿ ಬಲಪಡಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 
ಕೆನರಾ ಬ್ಯಾಂಕ್ ಬಗ್ಗೆ ಕೆಲ ಮಾಹಿತಿ
 
ಕೆನರಾ ಬ್ಯಾಂಕ್ ಭಾರತದ ಸರ್ಕಾರಿ ಸ್ವಾಮ್ಯದ ದೊಡ್ಡ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದನ್ನು 1906 ರಲ್ಲಿ ಅಮೇಂಬಲ್ ಸುಬ್ಬ ರಾವ್ ಪೈ ಅವರು ಮಂಗಳೂರಿನಲ್ಲಿ ಸ್ಥಾಪಿಸಿದರು. ಇದು ದೇಶದ ಅತ್ಯಂತ ಹಳೆಯ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾಗಿದೆ. ಸರ್ಕಾರವು 1969 ರಲ್ಲಿ ಈ ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಿತು.