ಫೇಸ್​ಬುಕ್ ಮಾಹಿತಿ ಸೇಲ್

0
383

ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್​ಬುಕ್​ನ 12 ಕೋಟಿ ಗ್ರಾಹಕರ ಖಾತೆ ಮಾಹಿತಿ ಹ್ಯಾಕರ್​ಗಳ ಕೈ ಸೇರಿದ್ದು, 81 ಸಾವಿರ ಖಾತೆದಾರರ ಖಾಸಗಿ ಮಾಹಿತಿಗಳನ್ನು ಮಾರಾಟಕ್ಕಿಡಲಾಗಿದೆ.

ಮಾಸ್ಕೊ: ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್​ಬುಕ್​ನ 12 ಕೋಟಿ ಗ್ರಾಹಕರ ಖಾತೆ ಮಾಹಿತಿ ಹ್ಯಾಕರ್​ಗಳ ಕೈ ಸೇರಿದ್ದು, 81 ಸಾವಿರ ಖಾತೆದಾರರ ಖಾಸಗಿ ಮಾಹಿತಿಗಳನ್ನು ಮಾರಾಟಕ್ಕಿಡಲಾಗಿದೆ.

ರಷ್ಯಾದ ಹ್ಯಾಕರ್​ಗಳು ಬ್ರೌಸರ್​ಗಳಲ್ಲಿ ಮಾಲ್​ವೇರ್​ಗಳನ್ನು ಬಿಟ್ಟು ಮಾಹಿತಿ ಕದ್ದಿದ್ದಾರೆ. ಇವುಗಳನ್ನು ಪ್ರತ್ಯೇಕ ವೆಬ್​ಸೈಟ್​ನಲ್ಲಿ ಪ್ರಕ ಟಿಸಿ, ಮಾರಾಟ ಮಾಡುತ್ತಿದ್ದಾರೆ. ಪ್ರತಿ ಖಾತೆಯ ಖಾಸಗಿ ಮಾಹಿತಿಗಳಿಗೆ 10 ಸೆಂಟ್ ಹಣ ಪಡೆಯ ಲಾಗುತ್ತಿದೆ. ಅಂದರೆ 1 ಡಾಲರ್​ಗೆ 10 ಖಾತೆಗಳ ಮಾಹಿತಿ ನೀಡಲಾಗಿದೆ. ಭಾರತೀಯ ಕರೆನ್ಸಿ ಪ್ರಕಾರ ಒಂದು ಖಾತೆಯ ಮಾಹಿತಿಗೆ 6.42 ರೂಪಾಯಿ ಪಡೆಯಲಾಗುತ್ತಿದೆ.

ಬಿಬಿಸಿ ವಾಹಿನಿ ನಡೆಸಿರುವ ತನಿಖೆ ಪ್ರಕಾರ, ಸದ್ಯಕ್ಕೆ 81 ಸಾವಿರ ಖಾತೆಗಳ ಖಾಸಗಿ ಮಾಹಿತಿಗಳನ್ನು ಹ್ಯಾಕರ್​ಗಳು ಮಾರಾಟಕ್ಕಿಟ್ಟಿದ್ದಾರೆ. 12 ಕೋಟಿ ಖಾತೆದಾರರ ಖಾಸಗಿ ಮಾಹಿತಿಯು ಸೋರಿಕೆಯಾಗಿದೆ. ಆದರೆ ಎಲ್ಲವನ್ನೂ ಮಾರಾಟ ಮಾಡಿಲ್ಲ ಎಂದು ಹ್ಯಾಕರ್​ಗಳು ಬಿಬಿಸಿಗೆ ತಿಳಿಸಿದ್ದಾರೆ.

ಮಾಹಿತಿ ಸೋರಿಕೆಯಾಗಿರುವುದನ್ನು ಫೇಸ್​ಬುಕ್ ಒಪ್ಪಿಕೊಂಡಿದೆ. ಬ್ರೌಸರ್​ಗಳ ಜತೆ ಮಾತನಾಡಿ ಮಾಲ್​ವೇರ್ ತೆಗೆಯಲಾಗಿದೆ. ಹ್ಯಾಕರ್​ಗಳ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.

ಮಾಹಿತಿ ಸೋರಿಕೆ ಹೇಗೆ?

ಅಂತರ್ಜಾಲ ಸೇವೆಯ ವಿವಿಧ ಬ್ರೌಸರ್​ಗಳಲ್ಲಿ ರಷ್ಯಾ ಹ್ಯಾಕರ್​ಗಳು ಮಾಲ್​ವೇರ್​ಗಳನ್ನು ಬಿಟ್ಟಿದ್ದಾರೆ. ಈ ಮಾಲ್​ವೇರ್​ಗಳ ಮೂಲಕ ಫೇಸ್​ಬುಕ್ ಖಾತೆದಾರರ ಮಾಹಿತಿ ಕದಿಯಲಾಗಿದೆ. ಖಾತೆದಾರರ ಭೌಗೋಳಿಕ, ಶೈಕ್ಷಣಿಕ ಹಾಗೂ ಸಂಪರ್ಕದ ಮಾಹಿತಿಗಳು ಹ್ಯಾಕರ್​ಗಳ ಕೈ ಸೇರಿವೆ. ಬಿಬಿಸಿ ಪ್ರಕಾರ ಫೇಸ್​ಬುಕ್ ಪ್ರೊಫೈಲ್​ನಲ್ಲಿ ಹೈಡ್ ಮಾಡಿರದ ಎಲ್ಲ ಮಾಹಿತಿ ಕಳ್ಳತನವಾಗಿದೆ. 81 ಸಾವಿರ ಖಾತೆದಾರರ ಚಾಟ್, ಪೋಸ್ಟ್, ಚಿತ್ರ ಸೇರಿ ಎಲ್ಲ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ. ಎಫ್​ಬಿ-ಸೇಲರ್ ಎನ್ನುವ ವೆಬ್​ಪುಟದಲ್ಲಿ ಈ ಮಾಹಿತಿಗಳನ್ನು ಪ್ರಕಟಿಸಲಾಗಿತ್ತು. ಹ್ಯಾಕರ್​ಗಳು ಮಾರಾಟ ಮಾಡಿರುವ ಮಾಹಿತಿಗಳು ನೈಜವಾಗಿದೆ ಎಂದು ಫೇಸ್​ಬುಕ್ ಬಳಕೆದಾರರು ಕೂಡ ಖಾತ್ರಿಪಡಿಸಿದ್ದಾರೆ.

ವೆಬ್ ಪುಟಗಳಲ್ಲಿ ಮಾಹಿತಿ ಹರಾಜು

ಎಫ್​ಬಿ-ಸೇಲರ್ ವೆಬ್​ಪುಟದಲ್ಲಿ 81 ಸಾವಿರ ಖಾತೆದಾರರ ಮಾಹಿತಿ ಮಾರಾಟ ಮಾಡಲಾಗುತ್ತಿದೆ. ಕಳೆದ ಸೆಪ್ಟೆಂಬರ್​ನಿಂದ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಎರಡನೇ ಹಂತದಲ್ಲಿ 1.76 ಲಕ್ಷ ಖಾತೆಗಳ ಮಾಹಿತಿ ಬಹಿರಂಗಪಡಿಸಲಾಗುತ್ತಿದೆ ಎಂದು ಹ್ಯಾಕರ್​ಗಳು ತಿಳಿಸಿದ್ದಾರೆ.

ಕಾದಿದೆಯೇ ಆತಂಕ?

ಭಾರತೀಯ ಖಾತೆದಾರರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ 12 ಕೋಟಿ ಖಾತೆಗಳ ಮಾಹಿತಿಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುವುದಾಗಿ ಹ್ಯಾಕರ್​ಗಳು ಹೇಳಿಕೊಂಡಿದ್ದಾರೆ. ಸೋರಿಕೆಯಾಗುತ್ತಿರುವ ಮಾಹಿತಿಗಳು ತೀರ ಖಾಸಗಿ ವಿಚಾರ ಆಗಿರುವ ಕಾರಣ ಭವಿಷ್ಯದಲ್ಲಿ ಏನಾಗಬಹುದು ಎನ್ನುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.