ಫೆ.1ರಂದು ಮಧ್ಯಂತರ ಬಜೆಟ್​ ಮಂಡನೆ; ಜ.31ರಿಂದ ಫೆ.13ರವರೆಗೂ ಬಜೆಟ್​ ಅಧಿವೇಶನ

0
739

2019-20ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್​​​​​​ ಫೆಬ್ರವರಿ 1 ರಂದು ಮಂಡನೆಯಾಗಲಿದ್ದು, ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ 6ನೇ ಬಾರಿಗೆ ಬಜೆಟ್​ ಮಂಡಿಸಲಿದ್ದಾರೆ.

ನವದೆಹಲಿ: 2019-20ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್​​​​​​ ಫೆಬ್ರವರಿ 1 ರಂದು ಮಂಡನೆಯಾಗಲಿದ್ದು, ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ 6ನೇ ಬಾರಿಗೆ ಬಜೆಟ್​ ಮಂಡಿಸಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಬಜೆಟ್ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಅಂತಿಮ ಬಜೆಟ್ ಇದಾಗಿದೆ.

ಜನವರಿ 31ರಿಂದ ಫೆಬ್ರವರಿ 13ರವರೆಗೆ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಮೊದಲ ದಿನ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಜಂಟಿ ಅಧೀವೇಶನವನ್ನುದ್ದೇಶಿಸಿ (ಲೋಕಸಭೆ ಮತ್ತು ರಾಜ್ಯಸಭೆ) ಮಾತನಾಡಲಿದ್ದಾರೆ. ಜ.31ರಂದು ಆರ್ಥಿಕ ಸಮೀಕ್ಷೆಯನ್ನೂ ಮಂಡಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)