ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ : ಹಿಮಾದಾಸ್ ಗೆ ಚಿನ್ನ ಕರ್ನಾಟಕದ ಪೂವಮ್ಮಗೆ ಬೆಳ್ಳಿ

0
408

ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಓಟದಲ್ಲಿ ಅಸ್ಸಾಂನ ಹಿಮಾ ದಾಸ್ ಚಿನ್ನದ ಪದಕ ಮತ್ತು ಕರ್ನಾಟಕದ ಎಂ.ಆರ್.ಪೂವಮ್ಮ ಬೆಳ್ಳಿ ಪದಕ ಗೆದ್ದರು.

ಪಟಿಯಾಲ (ಪಿಟಿಐ): ಕರ್ನಾಟಕದ ಎಂ.ಆರ್.ಪೂವಮ್ಮ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದರು.

ಮಾರ್ಚ್ 18 ರ ಸೋಮವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಪೂವಮ್ಮ 53.13 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅಸ್ಸಾಂನ ಹಿಮಾ ದಾಸ್ ಚಿನ್ನದ ಪದಕ ಗಗಳಿಸಿದರು. ಗುರಿ ಮುಟ್ಟಲು ಅವರು 52.88 ಸೆಕೆಂಡುಗಳನ್ನು ತೆಗೆದುಕೊಂಡಿ ದ್ದರು. ಗುಜರಾತ್‌ನ ಸರಿತಾಬೆನ್ ಗಾಯಕವಾಡ್ ಕಂಚಿನ ಪದಕ ತಮ್ಮದಾ ಗಿಸಿಕೊಂಡರು.

ಸಿದ್ಧಾರ್ಥ್‌ಗೆ ಕಂಚು: ಪುರುಷರ ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಸಿದ್ಧಾರ್ಥ್ ಮೋಹನ್ ನಾಯಕ್ ಕಂಚಿನ ಪದಕ ಗೆದ್ದರು. ಅವರು 7.34 ಮೀಟರ್‌ಗಳ ಸಾಧನೆ ಮಾಡಿದರು. ಚಿನ್ನ ಗೆದ್ದ ಕೇರಳದ ಮೊಹಮ್ಮದ್ ಅನೀಸ್ ಯಾಹಿಯಾ 7.50 ಮೀಟರ್ಸ್ ಜಿಗಿದರು. ಅತಿಷ್ಟಂ ಬೆಳ್ಳಿ ಗೆದ್ದರು.