ಫಿಫಾ ವಿಶ್ವಕಪ್: ಸೆಮಿಫೈನಲ್​ ಪ್ರವೇಶಿಸಿದ ಫ್ರಾನ್ಸ್​

0
15

ತೀವ್ರ ಕುತೂಹಲ ಕೆರಳಿಸಿದ್ದ ಮೊದಲ ಕ್ವಾರ್ಟರ್​ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್​ ತಂಡ ಪ್ರಬಲ ಉರುಗ್ವೆ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್​ ಪ್ರವೇಶಿಸಿದೆ.

ನಿಜ್ನಿ ನಾವ್​ಗೊರಡ್: ತೀವ್ರ ಕುತೂಹಲ ಕೆರಳಿಸಿದ್ದ ಮೊದಲ ಕ್ವಾರ್ಟರ್​ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್​ ತಂಡ ಪ್ರಬಲ ಉರುಗ್ವೆ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್​ ಪ್ರವೇಶಿಸಿದೆ.

ಫ್ರಾನ್ಸ್​ ತಂಡ 2006ರ ನಂತರ ವಿಶ್ವಕಪ್​ ಸಮಿಫೈನಲ್​ಗೆ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಫ್ರಾನ್ಸ್​ ಪರ ರಾಫೆಲ್ ವರನೆ ಮತ್ತು ಆಂಟೊನಿ ಗ್ರೀಜ್ ಮನ್​ ತಲಾ ಒಂದು ಗೋಲು ಗಳಿಸಿದರು. ಫ್ರಾನ್ಸ್​ ತಂಡ ಶುಕ್ರವಾರ ನಡೆಯಲಿರುವ ಬ್ರೆಜಿಲ್​ ಮತ್ತು ಬೆಲ್ಜಿಯಂ ನಡುವಿನ ಪಂದ್ಯದ ವಿಜೇತರೊಂದಿಗೆ ಸೆಮಿಫೈನಲ್​ನಲ್ಲಿ ಸೆಣಸಲಿದೆ.