ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 99ನೇ ರ್ಯಾಂಕ್

0
19

ಫೆಬ್ರವರಿ ತಿಂಗಳ ಫಿಫಾ (ಫೆಡೆರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ ಮೂರು ಸ್ಥಾನಗಳ ಏರಿಕೆ ಕಂಡು 99ನೇ ಸ್ಥಾನ ಪಡೆದುಕೊಂಡಿದೆ.

2019 ರ ಎಎಫ್ ಸಿ ಏಷಿಯನ್ ಕಪ್ ನಲ್ಲಿ ತರಬೇತುದಾರ ಸ್ಟಿಫನ್ ಕಾನ್ಸ್ಟಂಟಿನ್ ನೇತೃತ್ವದ ಭಾರತೀಯ ಫುಟ್ ಬಾಲ್ ತಂಡ ಕಿರ್ಗಿಜ್ ರಿಪಬ್ಲಿಕ್ ತಂಡದ ಜೊತೆ ಸೆಣಸಲಿದೆ. ಈ ಪಂದ್ಯ ಇದೇ 27ರಂದು ಬಿಶ್ಕೆಕ್ ನ ಡೋಲನ್ ಒಮುರ್ಜಾಕೊವ್ ಕ್ರೀಡಾಂಗಣದಲ್ಲಿ ನಡೆಯಲಿದೆ.

27 ವರ್ಷಗಳ ನಂತರ ಭಾರತೀಯ ಫುಟ್ ಬಾಲ್ ತಂಡ ಈಗಾಗಲೇ ಏಷ್ಯಾ ಕಪ್ ನಲ್ಲಿ ತನ್ನ ಸ್ಥಾನ ಗಳಿಸಿಕೊಂಡಿದೆ. ಕಳೆದ ನವೆಂಬರ್ ನಲ್ಲಿ ನಡೆದ ಎಎಫ್ ಸಿ ಏಷ್ಯಾ ಕಪ್ ಅರ್ಹತಾ ಸುತ್ತಿನ ಗುಂಪು ಎ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ 2-2 ಡ್ರಾನಲ್ಲಿ ಪಂದ್ಯ ಅಂತ್ಯಗೊಳಿಸಿತ್ತು.

ಫೆಬ್ರವರಿಯ ರೇಟಿಂಗ್ ಪಾಯಿಂಟ್ ನಲ್ಲಿ ಭಾರತ ಆರು ಅಂಕಗಳನ್ನು ಪಡೆದುಕೊಂಡು ಮೂರು ಶ್ರೇಣಿಯಷ್ಟು ಮೇಲೇರಿತು. ಫೆಬ್ರವರಿಯಲ್ಲಿ  ಏಷ್ಯನ್ ಒಕ್ಕೂಟದಲ್ಲಿ 14ನೇ ರ್ಯಾಂಕ್ ಪಡೆದ ಭಾರತ ಒಂದು ಅಂಕಗಳಷ್ಟು ಮುಂದೆ ಹೋಗಿದೆ. ಈ ಪಟ್ಟಿಯಲ್ಲಿ ಇರಾನ್ ಮುಂಚೂಣಿಯಲ್ಲಿದೆ.