ಫಿಕ್ಕಿ ಫ್ಲೊ: ನೂತನ ಆ್ಯಪ್‌ ಬಿಡುಗಡೆ

0
373

ನವೋದ್ಯಮಿ ಮಹಿಳೆಯರಿಗೆ ನೆರವಾಗುವ ನೂತನ ‘ಆ್ಯಪ್‌’ ಅನ್ನು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟದ ಮಹಿಳಾ ವಿಭಾಗದ (ಫ್ಲೊ) ರಾಷ್ಟ್ರೀಯ ಅಧ್ಯಕ್ಷೆ ಹರಜಿಂದರ್‌ ಕೌರ್‌ ತಲ್ವಾರ್ ಅವರು ಏಪ್ರೀಲ್ 19 ರ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು.

ಬೆಂಗಳೂರು: ನವೋದ್ಯಮಿ ಮಹಿಳೆಯರಿಗೆ ನೆರವಾಗುವ ನೂತನ ‘ಆ್ಯಪ್‌’ ಅನ್ನು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟದ ಮಹಿಳಾ ವಿಭಾಗದ (ಫ್ಲೊ) ರಾಷ್ಟ್ರೀಯ ಅಧ್ಯಕ್ಷೆ ಹರಜಿಂದರ್‌ ಕೌರ್‌ ತಲ್ವಾರ್ ಅವರು ಏಪ್ರೀಲ್ 19 ರ  ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು.

‘ಫಿಕ್ಕಿ‘ ರಾಜ್ಯ ಘಟಕದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಆ್ಯಪ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸದಸ್ಯರು ಮಾತ್ರವೇ ಇದನ್ನು ಬಳಸಬಹುದಾಗಿದೆ’ ಎಂದರು.

ಈ ಆ್ಯಪ್‌ ನ ಕಾರ್ಯ : ‘ಆ್ಯಪ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಆರರಿಂದ ಎಂಟು ತಿಂಗಳ ಕಾಲ ಶ್ರಮಿಸಲಾಗಿದೆ. ನವೋದ್ಯಮಿ ಮಹಿಳಾ ಸದಸ್ಯರ ವಾಣಿಜ್ಯ ಚಟುವಟಿಕೆಗಳನ್ನು ಸಬಲೀಕರಣಗೊಳಿಸುವ ದಿಸೆಯಲ್ಲಿ ಮತ್ತು ಸರಳ ಸಂವಹನದ ಮೂಲಕ ಪ್ರಗತಿ ಸಾಧಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ’ ಎಂದರು.

ಅಧಿಕಾರ ಸ್ವೀಕಾರ: ಇದೇ ವೇಳೆ ‘ಫ್ಲೊ’ ಬೆಂಗಳೂರು ಘಟಕದ ಅಧ್ಯಕ್ಷರಾಗಿ ಶ್ರುತಿ ಮಿತ್ತಲ್‌ ಪದಗ್ರಹಣ ಮಾಡಿದರು. ನಿಕಟಪೂರ್ವ ಅಧ್ಯಕ್ಷೆ ಯಶೋಧರ ಶ್ರಾಫ್‌ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ರುತಿ, ಮುಂದಿನ ದಿನಗಳಲ್ಲಿ ಫ್ಲೊ ಬೆಳವಣಿಗೆಗೆ ಎಲ್ಲರ ಸಹಕಾರದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟ ಸ್ಥಾಪನೆ : 1927

॑# ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟದ ಸ್ಥಾಪಕರು : ಜಿ.ಡಿ.ಬಿರ್ಲಾ, ಪುರುಷೋತ್ತಮದಾಸ್ ಠಾಕೂರ್ ದಾಸ್

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟದ ಮಹಿಳಾ ವಿಭಾಗದ (ಫ್ಲೊ) ಸ್ಥಾಪನೆ : 1983

# ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ (ಫಿಕ್ಕಿ) ಒಕ್ಕೂಟದ ಮಹಿಳಾ ವಿಭಾಗದ (ಫ್ಲೊ) ಕೇಂದ್ರ ಕಚೇರಿ : ನವದೆಹಲಿ