ಫಾಲನ್‌ ರಾಜೀನಾಮೆ, ರಕ್ಷಣಾ ಕಾರ್ಯದರ್ಶಿಯಾಗಿ ಗ್ಯಾವಿನ್ ನೇಮಕ

0
17

ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಮೈಕೆಲ್ ಫಾಲನ್‌, ಗುರುವಾರ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗ್ಯಾವಿನ್‌ ವಿಲಿಯಮ್‌ಸನ್‌ ಅವರನ್ನು ಪ್ರಧಾನಿ ತೆರೇಸಾ ಮೇ ಅವರು ನೇಮಕ ಮಾಡಿದ್ದಾರೆ.

ಕಳೆದ ವರ್ಷ ಪತ್ರಕರ್ತೆ ಒಬ್ಬರು ಸೇರಿದಂತೆ ಹಲವರ ಜತೆ ಅಸಭ್ಯವಾಗಿ ವರ್ತಿಸಿರುವ ಹಾಗೂ ತಮ್ಮ ಸ್ಥಾನಕ್ಕೆ ತೋರಬೇಕಿರುವ ಗೌರವವನ್ನು ಕಾಪಾಡಿಕೊಳ್ಳದ ಆರೋಪ ಮೈಕೆಲ್ ಫಾಲನ್‌ ಮೇಲಿದೆ. ಇದರಿಂದ ಅವರು ರಾಜೀನಾಮೆ ನೀಡಿದ್ದಾರೆ.

‘ನನ್ನ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಗಿದೆ. ಆದರೆ ಈ ಪೈಕಿ ಹಲವು ಆರೋಪಗಳು ಸುಳ್ಳು. ಇದೇ ವೇಳೆ, ಕೆಲವೊಂದು ವಿಷಯದಲ್ಲಿ ನನ್ನ ಸ್ಥಾನದ ಗೌರವ ಕಾಪಾಡಿಕೊಳ್ಳಲಿಲ್ಲ ಎನ್ನುವುದು ಸತ್ಯ. ಆದ್ದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಮೈಕೆಲ್‌ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.