ಪ್ರೊ ವಾಲಿಬಾಲ್ ಲೀಗ್ ಆರಂಭ

0
593

ಭಾರತದ ಕ್ರೀಡಾಲೀಗ್​ಗಳ ಸಾಲಿಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಗೆ ಮುಹೂರ್ತ ಕೂಡಿಬಂದಿದೆ. ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್​ಗೆ ಜನೇವರಿ 2 ರ ಶನಿವಾರ ಚಾಲನೆ ನೀಡಲಾಗಿದೆ, ಕೊಚ್ಚಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಯು ಮುಂಬಾ ವಾಲಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಕೊಚ್ಚಿ: ಭಾರತದ ಕ್ರೀಡಾಲೀಗ್​ಗಳ ಸಾಲಿಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಗೆ ಮುಹೂರ್ತ ಕೂಡಿಬಂದಿದೆ. ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್​ಗೆ 2019 ಜನೇವರಿ 2 ರ  ಶನಿವಾರ ಚಾಲನೆ ನೀಡಲಾಗಿದೆ , ಕೊಚ್ಚಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಯು ಮುಂಬಾ ವಾಲಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 18 ಪಂದ್ಯ ನಡೆಯಲಿವೆ. ಲೀಗ್ ಹಂತದಲ್ಲಿ 6 ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ ಒಮ್ಮೆ ಮುಖಾಮುಖಿ ಆಗಲಿವೆ. ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿವೆ. ಕೊಚ್ಚಿಯಲ್ಲಿ ಮೊದಲ 12 ಪಂದ್ಯಗಳು ನಡೆದರೆ, ಚೆನ್ನೈನಲ್ಲಿ ಸೆಮಿಫೈನಲ್, ಫೈನಲ್ ಸಹಿತ ಉಳಿದ 6 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಫೆ. 22ರಂದು ನಡೆಯಲಿದೆ. ಭಾರತೀಯ ವಾಲಿಬಾಲ್ ಫೆಡರೇಷನ್ ಮತ್ತು ಬೇಸ್​ಲೈನ್ ವೆಂಚರ್ಸ್ ಇಂಡಿಯಾ ಪ್ರೖೆವೆಟ್ ಲಿಮಿಟೆಡ್​ನ ಜಂಟಿ ಸಹಯೋಗದ ಟೂರ್ನಿ ಇದಾಗಿದೆ. ಪ್ರತಿ ತಂಡದಲ್ಲಿ ಇಬ್ಬರು ವಿದೇಶಿಯರು ಮತ್ತು ಓರ್ವ ಭಾರತೀಯ ಐಕಾನ್ ಆಟಗಾರ, ಇಬ್ಬರು ಭಾರತೀಯ 21 ವಯೋಮಿತಿ ಆಟಗಾರರ ಸಹಿತ ಒಟ್ಟು 12 ಆಟಗಾರರು ಇರುತ್ತಾರೆ. -ಏಜೆನ್ಸೀಸ್

ಹೊಸತನದ ನಿಯಮ

ಲೀಗ್ ಹಂತದಲ್ಲಿ 5 ಸೆಟ್​ಗಳ ಪಂದ್ಯ ನಡೆಯಲಿದ್ದು, ಮೊದಲು 15 ಅಂಕ ಗಳಿಸಿದ ತಂಡ ಸೆಟ್ ಜಯಿಸಲಿದೆ. ಪ್ರತಿ ಪಂದ್ಯದ ವಿಜೇತ ತಂಡ 2 ಅಂಕ ಗಳಿಸಲಿದೆ. 5-0 ಅಂತರದಿಂದ ಗೆದ್ದ ತಂಡ 3 ಅಂಕ ಗಳಿಸಲಿದೆ. ನಾಕೌಟ್ ಹಂತದಲ್ಲಿ ಪ್ರತಿ ಸೆಟ್​ನಲ್ಲಿ 25 ಅಂಕ ಇರಲಿದೆ. ಸೂಪರ್ ಸರ್ವ್ ಎಂಬ ಹೊಸ ಕಾನ್ಸೆಪ್ಟ್ ಕೂಡ ಇರಲಿದ್ದು, ಪ್ರತಿ ಏಸ್ ಸರ್ವ್​ಗೆ 2 ಅಂಕ ಸಿಗಲಿದೆ.

ತಂಡಗಳ ನಾಯಕರು

ರಂಜಿತ್ ಸಿಂಗ್ (ಅಹಮದಾಬಾದ್ ಡಿಫೆಂಡರ್ಸ್)

ಕರ್ಸನ್ ಕ್ಲಾರ್ಕ್ (ಬ್ಲಾ್ಯಕ್ ಹ್ವಾಕ್ಸ್ ಹೈದರಾಬಾದ್)

ಜೆರೋಮ್ ವಿನಿತ್ (ಕ್ಯಾಲಿಕಟ್ ಹೀರೋಸ್)

ಮೋಹನ್ ಉಕ್ರಪಾಂಡಿಯನ್ (ಕೊಚ್ಚಿ ಬ್ಲೂ ಸ್ಪೈಕರ್ಸ್)

ಶೆಲ್ಟನ್ ಮೋಸೆಸ್ (ಚೆನ್ನೈ ಸ್ಪಾರ್ಟನ್ಸ್)

ದೀಪೇಶ್ ಸಿನ್ಹಾ (ಯು ಮುಂಬಾ ವಾಲಿ)