ಪ್ರೊ ವಾಲಿಬಾಲ್‌ಗೆ ಸಿಂಧು ಪ್ರಚಾರ ರಾಯಭಾರಿ

0
257

ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಪ್ರೊ ವಾಲಿಬಾಲ್ ಲೀಗ್‌ನ ಮೊದಲ ಆವೃತ್ತಿಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತು ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಡೇವಿಡ್ ಲೀ ಅವರು ಪ್ರಚಾರ ರಾಯಭಾರಿಯಾಗಿದ್ದಾರೆ.

ಮುಂಬೈ (ಪಿಟಿಐ): ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಪ್ರೊ ವಾಲಿಬಾಲ್ ಲೀಗ್‌ನ ಮೊದಲ ಆವೃತ್ತಿಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತು ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಡೇವಿಡ್ ಲೀ ಅವರು ಪ್ರಚಾರ ರಾಯಭಾರಿಯಾಗಿದ್ದಾರೆ.

‘ನನ್ನ ಅಪ್ಪ ವಾಲಿಬಾಲ್‌ ಆಡುತ್ತಿದ್ದರು. ಆದ್ದರಿಂದ ವಾಲಿಬಾಲ್ ಬಗ್ಗೆ ಬಹಳ ಪ್ರೀತಿ ಇದೆ. ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಈ ಆಟಕ್ಕೆ ಇದೆ ’ ಎಂದು ಸಿಂಧು ಹೇಳಿದ್ದಾರೆ.