ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್‌ ಟೂರ್ನಿ :ಶಿವ ಥಾಪಾಗೆ ಚಿನ್ನದ ಗರಿ

0
15

ಭಾರತದ ಶವ ಥಾಪಾ ಜುಲೈ 20 ರ ಶನಿವಾರ ಕಜಕಸ್ತಾನದ ಅಸ್ತಾನದಲ್ಲಿ ನಡೆ ಯುತ್ತಿರುವ ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್‌ ಟೂರ್ನಿಯ 63 ಕೆಜಿ ವಿಭಾಗದ ಚಾಂಪಿಯನ್‌ ಆಗುವ ಚಿನ್ನದ ಪದಕವನ್ನು ಗೆದ್ದಿರುವರು.

ನವದೆಹಲಿ (ಪಿಟಿಐ): ಭಾರತದ ಶವ ಥಾಪಾ, ಜುಲೈ 20 ರ ಶನಿವಾರ ಕಜಕಸ್ತಾನದ ಅಸ್ತಾನದಲ್ಲಿ ನಡೆ ಯುತ್ತಿರುವ  ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್‌ ಟೂರ್ನಿಯ 63 ಕೆಜಿ ವಿಭಾಗದ ಚಾಂಪಿಯನ್‌ ಆದರು.  ಟೂರ್ನಿಯ ಫೈನಲ್‌ ಪಂದ್ಯ ದಲ್ಲಿ ಅವರಿಗೆ ವಾಕ್‌ಓವರ್‌ ಸಿಕ್ಕಿತು. ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್‌ ಎಂಬ ಶ್ರೇಯ ಅವರದಾಯಿತು.

ಅಂತಿಮ ಪಂದ್ಯದಲ್ಲಿ ಥಾಪಾ ಸ್ಥಳೀಯ ಆಟಗಾರ ಜಾಕೀರ್‌ ಸಫಿ ವುಲ್ಲಿನ್‌ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಹಿನ್ನೆಲೆಯಲ್ಲಿ ಎದುರಾಳಿ ಪಂದ್ಯದಿಂದ ಹಿಂದೆ ಸರಿದರು.

ಈ ವರ್ಷದ ಆರಂಭದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಷಿಪ್ ಸೆಮಿಫೈನಲ್‌ ನಲ್ಲಿ ಸಫಿವುಲ್ಲಿನ್‌ ಎದುರು ಥಾಪಾ ಸೋಲು ಕಂಡಿದ್ದರು. 

ಟೂರ್ನಿಯ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಫೈನಲ್‌ ಪಂದ್ಯದಲ್ಲಿ ಭಾರತದ ಪರ್ವೀನ್‌ ಅವರು ಸ್ಥಳೀಯ ಆಟಗಾರ್ತಿ ರಿಮ್ಮಾ ವೊಲೊಸೆಂಕೊ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
 
ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಸ್ವೀಟಿ ಬೂರಾ (81 ಕೆಜಿ), ದುರ್ಯೋಧನ ಸಿಂಗ್‌ ನೇಗಿ (69 ಕೆಜಿ) ಸೋಲು ಕಾಣುವ ಮೂಲಕ ಕಂಚಿನ ಪದಕಗಳಿಗೆ ತೃಪ್ತಿಪಟ್ಟರು.
 
ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಗೆ ಆಯ್ಕೆಯಾಗಲು ಶಿವ ಥಾಪಾ ವಿಫಲವಾಗಿದ್ದಾರೆ. ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಮನೀಷ್‌ ಕೌಶಿಕ್‌ ಎದುರು ಮುಗ್ಗರಿಸಿದ್ದರು.