ಪ್ರೀ-ಸ್ಕೂಲ್​ ಮಕ್ಕಳಿಗೆ ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸುವುದು ಬೇಕಾಗಿಲ್ಲ; ಎನ್​ಸಿಇಆರ್​ಟಿ ಸಲಹೆ

0
13

ಪ್ರೀ-ಸ್ಕೂಲ್​ ಮಕ್ಕಳಿಗೆ ಯಾವುದೇ ವಿಧದಲ್ಲಿ ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಮಂಡಳಿ (ಎನ್​ಸಿಇಆರ್​ಟಿ) ತಿಳಿಸಿದೆ.

ನವದೆಹಲಿ: ಪ್ರೀ-ಸ್ಕೂಲ್​ ಮಕ್ಕಳಿಗೆ ಯಾವುದೇ ವಿಧದಲ್ಲಿ ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಮಂಡಳಿ (ಎನ್​ಸಿಇಆರ್​ಟಿ) ತಿಳಿಸಿದೆ.

ಪೂರ್ವ ಪ್ರಾಥಮಿಕ ಹಂತ(ಪ್ರೀ-ಸ್ಕೂಲ್​)ದಲ್ಲಿ ನಡೆಸುವ ಮೌಲ್ಯಮಾಪನ ಮಕ್ಕಳನ್ನು ಪಾಸ್​ ಅಥವಾ ಫೇಲ್ ಎಂದು ವಿಭಾಗಿಸುವುದಕ್ಕಲ್ಲ. ಹಾಗಾಗಿ ಈ ಹಂತದಲ್ಲಿ ಯಾವುದೇ ಮಾದರಿಯಲ್ಲಿ ಮಕ್ಕಳಿಗೆ ಲಿಖಿತ ಅಥವಾ ಮೌಖಿಕ ಪರೀಕ್ಷೆಗಳು ನಿರ್ವಹಿಸಬಾರದು ಎಂದು ಎನ್​ಸಿಇಆರ್​ಟಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ ಪೂರ್ವ ಪ್ರಾಥಮಿಕ ಹಂತದಿಂದಲ್ಲೇ ಅತಿ ಎನ್ನಿಸುವಷ್ಟು ಕಲಿಕೆ ನೀಡಲಾಗುತ್ತದೆ. ಸಾಂಪ್ರದಾಯಿಕ ಕಲಿಕೆ, ಮನೆ ಕೆಲಸ ಮತ್ತು ಪರೀಕ್ಷೆಗಳಿಂದಾಗಿ ಮಕ್ಕಳು ಸಣ್ಣ ವಯಸ್ಸಿನಲ್ಲೇ ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಚುರುಕುತನ ಕಡಿಮೆಯಾಗುತ್ತಿದೆ. ಪೂರ್ವ ಪ್ರಾಥಮಿಕ ಶಾಲಾ ಹಂತದ ಅತಿಯಾದ ಕಲಿಕಾ ಚಟುವಟಿಕೆಗಳು ಮಕ್ಕಳ ಆಟವಾಡುವ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎಂದು ಎನ್​ಸಿಇಆರ್​ಟಿ ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಪ್ರಾಥಮಿಕ ಹಂತದಲ್ಲಿ ಅಸೈನ್ಮೆಂಟ್​ಗಳು ನೀಡುವ ಕುರಿತು ಎನ್​ಸಿಇಆರ್​ಟಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ಉಪಾಖ್ಯಾನ ದಾಖಲೆಗಳು, ಚೆಕ್​ಲಿಸ್ಟ್​​, ಮಕ್ಕಳೊಂದಿಗೆ ಬೆರೆಯುವ ಮೂಲಕ ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು. ಮಕ್ಕಳು ಸಮಯವನ್ನು ಹೇಗೆ ಮತ್ತು ಎಲ್ಲಿ ಕಳೆಯುತ್ತಿದ್ದಾರೆ, ಅವರ ಸಾಮಾಜಿಕ ಸಂಬಂಧಗಳು, ಅವರು ಬಳಸುವ ಭಾಷೆ, ಪರಸ್ಪರ ಸಂವಹನ ಹಾಗೂ ಅವರ ಆರೋಗ್ಯ ಕುರಿತು ಸಮಗ್ರವಾಗಿ ಅವಲೋಕಿಸಿ ವರದಿ ತಯಾರಿಸಬೇಕು ಎಂದು        ಎನ್​ಸಿಇಆರ್​ಟಿ ಹೇಳಿದೆ.