ಪ್ರೀತು ಗುಪ್ತಾ 64ನೇ ಚೆಸ್‌ “ಗ್ರ್ಯಾಂಡ್‌ಮಾಸ್ಟರ್‌”

0
18

ದೆಹಲಿಯ ಪ್ರೀತು ಗುಪ್ತಾ, ಭಾರತದ 64ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದರು. ಪೋರ್ಚುಗೀಸ್‌ ಲೀಗ್‌ನ ಐದನೇ ಸುತ್ತಿನಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಲವೆಸ್‌ ಯಂಕೆಲೆವಿಚ್‌ (ಜರ್ಮನಿ) ಅವರನ್ನು ಸೋಲಿಸುವ ಮೂಲಕ ಅವರು 2,500 ರೇಟಿಂಗ್‌ ದಾಟಿದರು.

ನವದೆಹಲಿ (ಪಿಟಿಐ): ದೆಹಲಿಯ ಪ್ರೀತು ಗುಪ್ತಾ, ಭಾರತದ 64ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದರು. ಪೋರ್ಚುಗೀಸ್‌ ಲೀಗ್‌ನ ಐದನೇ ಸುತ್ತಿನಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಲವೆಸ್‌ ಯಂಕೆಲೆವಿಚ್‌ (ಜರ್ಮನಿ) ಅವರನ್ನು ಸೋಲಿಸುವ ಮೂಲಕ ಅವರು 2,500 ರೇಟಿಂಗ್‌ ದಾಟಿದರು.

9ನೇ ವಯಸ್ಸಿನಲ್ಲಿ ಚೆಸ್‌ ಕಲಿತ ಪ್ರೀತುಗೆ ಈಗ 15 ವರ್ಷ, 4 ತಿಂಗಳು, 10 ದಿನ. ತಮಿಳುನಾಡಿನ ಡಿ.ಗುಕೇಶ್‌ ದೇಶದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ (12 ವರ್ಷ, 7ತಿಂಗಳು, 17 ದಿನ) ಎನಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಗುಕೇಶ್‌ ಈ ಪಟ್ಟಕ್ಕೇರಿದ್ದರು.

 ಭಾರತದ ಮೊದಲ ಜಿಎಂ ವಿಶ್ವನಾಥನ್‌ ಆನಂದ್‌, ಪ್ರೀತು ಅವರನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷ ಜಿಬ್ರಾಲ್ಟರ್‌ನಲ್ಲಿ  ಮೊದಲ ಜಿಎಂ ನಾರ್ಮ್ ಪಡೆದ ಗುಪ್ತಾ, ಬೀಲ್‌ ಮಾಸ್ಟರ್ಸ್‌ನಲ್ಲಿ ಅದೇ ವರ್ಷ ಎರಡನೇ ನಾಮ್‌ ಗಿಟ್ಟಿಸಿದ್ದರು. ಈ ತಿಂಗಳ ಆರಂಭದಲ್ಲಿ ಪೊರ್ಟಿಸಿಯೊ ಓಪನ್‌ನಲ್ಲಿ ಮೂರನೇ ನಾರ್ಮ್‌ ಸಂಪಾದಿಸಿದ ಅವರು ಈಗ ಅಗತ್ಯ ರೇಟಿಂಗ್ ದಾಟಿದ್ದಾರೆ.