ಪ್ರಧಾನ್ ಮಂತ್ರಿ ಕಿಸಾನ್‌ ಮಾನ್‌ಧನ್‌ ಮತ್ತು ಲಘು ವ್ಯಾಪಾರಿ ಮಾನ್‌ಧನ್‌ ಪಿಂಚಣಿ ಯೋಜನೆಗಳಿಗೆ ಚಾಲನೆ

0
72

ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡವರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 12 ರ ಗುರುವಾರ ಇಲ್ಲಿ ಚಾಲನೆ ನೀಡಿದರು.

ರಾಂಚಿ (ಪಿಟಿಐ): ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡವರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್  12 ರ  ಗುರುವಾರ ಇಲ್ಲಿ ಚಾಲನೆ ನೀಡಿದರು.

ಸಣ್ಣ ಹಾಗೂ ಮಧ್ಯಮ ರೈತರು ‘ಪ್ರಧಾನ್ ಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆ’ಯಡಿ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ 60 ವರ್ಷ ಆದಾಗ, ಮಾಸಿಕ ಕನಿಷ್ಠ ₹ 3,000 ಪಿಂಚಣಿ ನೀಡಲಾಗುತ್ತದೆ.

ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ‘ಪ್ರಧಾನ್‌ ಮಂತ್ರಿ ಲಘು ವ್ಯಾಪಾರಿ ಮಾನ್‌ಧನ್‌ ಯೋಜನೆ’, ಸ್ವಯಂ ಉದ್ಯೋಗ ಕೈಗೊಂಡವರಿಗಾಗಿ ‘ಸ್ವರೋಜಗಾರ್‌ ಪಿಂಚಣಿ ಯೋಜನೆ’ಗೂ ಚಾಲನೆ ನೀಡಲಾಯಿತು.
 
ಯೋಜನೆಯ ವೈಶಿಷ್ಟ್ಯಗಳು
 
# 18–40 ವರ್ಷದ ಒಳಗಿನವರು ಹಾಗೂ ಮಾಸಿಕ ₹ 15,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು
 
# ಫಲಾನುಭವಿ ತುಂಬುವ ಕಂತಿನ ಮೊತ್ತದಷ್ಟೇ ಹಣವನ್ನು ಸರ್ಕಾರ ಭರಿಸುವುದು. ಈ ಯೋಜನೆಯಡಿ ನೋಂದಣಿಗೆ ಕನಿಷ್ಠ ಶಿಕ್ಷಣ ಪಡೆದಿರಬೇಕು ಎಂಬ ನಿಬಂಧನೆ ಇಲ್ಲ.
 
# ಎನ್‌ಪಿಎಸ್‌, ಇಎಸ್‌ಐಸಿ, ಇಪಿಎಫ್‌ ಸೌಲಭ್ಯ ಹೊಂದಿದವರು ಹಾಗೂ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗಳ ಲಾಭ ಪಡೆಯಲು ಅರ್ಹರಲ್ಲ.
 
# ಫಲಾನುಭವಿಯ ವಯಸ್ಸಿಗೆ ಅನುಗುಣವಾಗಿ ಮಾಸಿಕ ₹ 55 ರಿಂದ ₹ 400 ರಂತೆ 60 ವರ್ಷದ ವರೆಗೆ ಕಂತು ತುಂಬಬೇಕು. ಯೋಜನೆ ಕುರಿತ ವಿವರಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳನ್ನುಸಂಪರ್ಕಿಸಬಹುದು.
 
 
ಪ್ರಧಾನ್ ಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆ’
 
ಮೊದಲ ಹಂತದಲ್ಲಿ 5 ಕೋಟಿ ರೈತರಿಗೆ ಉಪಯೋಗ
 
# 18 ವರ್ಷದ ರೈತ ಮಾಸಿಕ 55 ರೂ. ಕಟ್ಟಬೇಕು. 29 ವರ್ಷದ ವ್ಯಕ್ತಿ ಮಾಸಿಕ 100 ರೂ. ಕಟ್ಟಬೇಕಾಗುತ್ತದೆ. ವಯಸ್ಸಿನ ಆಧಾರದಲ್ಲಿ ಕಂತಿನ ಮೊತ್ತ ನಿಗದಿ
 
# ರೈತರು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಪಡೆದ ಹಣದಿಂದ ಮಾಸಿಕ ಕಂತು ಕಟ್ಟಲು ಅವಕಾಶ. ಆನ್​ಲೈನ್ ಮೂಲಕವೂ ನೋಂದಣಿ ಸೌಲಭ್ಯ
 
# ಕಂತನ್ನು ಅರ್ಧದಲ್ಲಿ ನಿಲ್ಲಿಸಿದರೆ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಲಭ್ಯ
 
60 ವರ್ಷ ತುಂಬುವುದರೊಳಗೆ ರೈತ ಮೃತನಾದರೆ ಆತನ ಪತ್ನಿ ಮಾಸಿಕ ಕಂತನ್ನು ಕಟ್ಟಬಹುದು
 
ಯೋಜನೆಯ ಫಲಾನುಭವಿಯಾಗಲು ಆಧಾರ್ ಕಾರ್ಡ್ ಕಡ್ಡಾಯ
 
 
ಪ್ರಧಾನ್‌ ಮಂತ್ರಿ ಲಘು ವ್ಯಾಪಾರಿ ಮಾನ್‌ಧನ್‌ ಯೋಜನೆ’ : ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಲಘು ವ್ಯಾಪಾರಿ ಮಾನಧನ ಯೋಜನೆ ಜಾರಿಗೆ ತರಲಾಗಿದೆ. 18-40 ವರ್ಷದೊಳಗಿನ ವ್ಯಾಪಾರಿಗಳು ಯೋಜನೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, 60 ವರ್ಷದ ಬಳಿಕ 3000 ರೂ. ಪಿಂಚಣಿ ಸಿಗುತ್ತದೆ.
 
# 3 ಕೋಟಿ ವ್ಯಾಪಾರಿಗಳಿಗೆ ಪ್ರಯೋಜನ
 
# ಜಿಎಸ್​ಟಿ ಅನ್ವಯ ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಿಂತ ಕಡಿಮೆ ಇರುವವರು ಯೋಜನೆಗೆ ಅರ್ಹರು
 
# ಮಾಸಿಕ ಕಂತು 50 ರೂ. ನಿಂದ ಆರಂಭ. ವಯಸ್ಸಿನ ಆಧಾರದಲ್ಲಿ ಮೊತ್ತ ನಿಗದಿ
 
# ಫಲಾನುಭವಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಕಡ್ಡಾಯ