ಪ್ರಧಾನ್ ಗುರುದತ್ತ ಸೇರಿ ಐವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ “ಗೌರವ ಪ್ರಶಸ್ತಿ”

0
17

ಹಿರಿಯ ಸಾಹಿತಿಗಳಾದ ಡಾ.ಪ್ರಧಾನ್ ಗುರುದತ್ತ, ಎಸ್.ಆರ್.ರಾಮಸ್ವಾಮಿ ಸೇರಿದಂತೆ ಐವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2019–20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು: ಹಿರಿಯ ಸಾಹಿತಿಗಳಾದ ಡಾ.ಪ್ರಧಾನ್ ಗುರುದತ್ತ, ಎಸ್.ಆರ್.ರಾಮಸ್ವಾಮಿ ಸೇರಿದಂತೆ ಐವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2019–20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

2018ರಲ್ಲಿ ಅನುವಾದಗೊಂಡಿರುವ ಐದು ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ವನ್ನೂ ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪುಸ್ತಕ ಬಹುಮಾನ ತಲಾ 25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ: ಡಾ.ಪ್ರಧಾನ್ ಗುರುದತ್ತ (ಮೈಸೂರು), ಎಸ್.ಆರ್. ರಾಮಸ್ವಾಮಿ (ಬೆಂಗಳೂರು), ಪ್ರೊ.ಬಾಲಚಂದ್ರ ಜಯಶೆಟ್ಟಿ (ಬೀದರ್), ಎಲ್.ವಿ. ಶಾಂತಕುಮಾರಿ (ಬೆಂಗಳೂರು), ಡಾ.ಆರ್.ಲಕ್ಷ್ಮೀನಾರಾಯಣ (ಬೆಂಗಳೂರು). 

ಪುಸ್ತಕ ಬಹುಮಾನ ವಿಭಾಗ: ದಾಸ್ಯದಿಂದ ಆಚೆಗೆ–ಡಾ.ಕೆ.ಪುಟ್ಟಸ್ವಾಮಿ (ಇಂಗ್ಲಿಷ್‌ನಿಂದ ಕನ್ನಡ), ಎ ಹ್ಯಾಂಡ್‌ಫುಲ್ ಆಫ್ ಸೇಸಮಿ–ಮೈತ್ರೇಯಿ ಕರ್ನೂರು (ಕನ್ನಡದಿಂದ ಇಂಗ್ಲಿಷ್), ಭಾರತೀಯ ತತ್ವಶಾಸ್ತ್ರ –ಡಾ.ಸಿದ್ಧರಾಮಸ್ವಾಮಿ (ಹಿಂದಿಯಿಂದ ಕನ್ನಡ), ಕರ್ವಾಲೊ–ಡಾ.ನರೇಂದ್ರ ರೈ ದೇರ್ಲ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ), ಅಂತರ ಆಯಾಮಿ–ಗೀತಾ ಶೆಣೈ (ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ).